HomeKarnatakaBIG NEWS: ಮಾಧ್ಯಮಗಳ ವಿರುದ್ಧ ಗರಂ ಆದ ಡಿ.ಕೆ.ಶಿವಕುಮಾರ್; ಎಲ್ಲಾ ಬೋಗಸ್ ಸುದ್ದಿ ಹಾಕುತ್ತಿದ್ದೀರಾ...

BIG NEWS: ಮಾಧ್ಯಮಗಳ ವಿರುದ್ಧ ಗರಂ ಆದ ಡಿ.ಕೆ.ಶಿವಕುಮಾರ್; ಎಲ್ಲಾ ಬೋಗಸ್ ಸುದ್ದಿ ಹಾಕುತ್ತಿದ್ದೀರಾ ಎಂದು ಕಿಡಿ

ನವದೆಹಲಿ: ನೂತನ ಸಿಎಂ ಅಯ್ಕೆ ಹಗ್ಗಜಗ್ಗಾಟ ಮುಂದುವರೆದಿದ್ದು, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಹೊರ ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

ನವದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಹೊರ ಬಂದ ಡಿ.ಕೆ.ಶಿವಕುಮಾರ್ ಅವರಿಗೆ ಸುದ್ದಿಗಾರರು ರಾಹುಲ್ ಗಾಂಧಿ, ಹಾಗೂ ಮಲ್ಲಿಕಾರ್ಜುನ ಖರ್ಗೆ ಜೊತೆ ನಡೆದ ಚರ್ಚೆಯೇನು? ಒಂದು ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿವೆ ಆದರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, ನಾನು ಏನೂ ಮಾತನಾಡುವುದಿಲ್ಲ, ನೀವು ಬರಿ ಬೋಗಸ್ ಸುದ್ದಿಗಳನ್ನು ಹಾಕುತ್ತಿದ್ದೀರಾ ಎಂದು ಸಿಡಿಮಿಡಿಗೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಬೋಗಸ್ ಸುದ್ದಿಗಳನ್ನು ಹಾಕುತ್ತಿದ್ದೀರಿ. ಯಾವುದೂ ಸತ್ಯವಲ್ಲ, ಯಾರೋ ಹೇಳಿದ ಊಹಾಪೋಹಗಳ ಸುದ್ದಿಗಳನ್ನು ಹಾಕಿ ಗಾಸಿಪ್ ಸೃಷ್ಟಿಸುತ್ತಿದ್ದೀರಿ. ಯಾವುದೂ ನಿಜವಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular