ಗುರುಗ್ರಾಮ: ಕ್ಯಾಬ್-ಬುಕಿಂಗ್ ಸಾಹಸ ಹಲವರನ್ನು ಅಸಹನೆಗೆ ದೂಡಿದ್ದಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಅನುಭವಿಸಿದ ಸುಂದರ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವ್ಯಕ್ತಿ ಇದನ್ನು ಶೇರ್ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಖಂಡಿತವಾಗಿಯೂ ಇಂಥ ಸುಂದರ ಅನುಭವ ಸಿಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಟ್ವಿಟ್ಟರ್ ಬಳಕೆದಾರ ಮೊನಾರ್ಕ್ ಮೂಲಚಂದಾನಿ ತಮ್ಮ ಟ್ವಿಟರ್ನಲ್ಲಿ ಈ ವಿಷಯ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಗುರುಗ್ರಾಮಕ್ಕೆ ಹೋದಾಗ ಆದ ಅನುಭವ ಇದು. ಕ್ಯಾಬ್ ಬುಕ್ ಮಾಡುವ ಬಗ್ಗೆ ಸಂತೋಷಕರ ಅನುಭವ ತಮಗಾಗಿದೆ ಎಂದಿದ್ದಾರೆ.
ಕ್ಯಾಬ್ ಬುಕ್ ಮಾಡಿದಾಗ ಡ್ರೈವರ್ಗೆ ನಾನು ಕರೆ ಮಾಡಿದೆ. ಆಗ ಆತ ಐದು ನಿಮಿಷ ಸರ್, ದಯವಿಟ್ಟು ಕಾಯಿರಿ. ಹಸಿವೆ ಆಗುತ್ತಿತ್ತು. ಸಮೋಸಾ ತಿನ್ನುತ್ತಿದ್ದೇನೆ ಎಂದ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆತ ನಿಮಗಾಗಿ ಒಂದು ಸಮೋಸಾ ತರಲೇ ಸರ್, ಇಲ್ಲಿ ತುಂಬಾ ಚೆನ್ನಾಗಿ ಸಿಗುತ್ತದೆ ಎಂದ. ಇದನ್ನು ಕೇಳಿ ನನಗೆ ತುಂಬಾ ಅಚ್ಚರಿಯಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಕ್ಯಾಬ್ ಬುಕ್ಕಿಂಗ್ ಸಮಯದಲ್ಲಿ ತಮಗಾಗಿರುವ ಕಹಿ ಅನುಭವಗಳನ್ನು ಹಲವರು ಇದೇ ವೇಳೆ ಶೇರ್ ಮಾಡಿಕೊಂಡಿದ್ದಾರೆ.