ಕಾವ್ಯಾತ್ಮಕವಾಗಿ ವಿಮಾನ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡಿರುವ ವಿಮಾನ ಪೈಲಟ್ ನ ಹಾಸ್ಯದ ವಿಡಿಯೋ ಮತ್ತೊಮ್ಮೆ ಹಲವರ ಗಮನ ಸೆಳೆದಿದ್ದು, ವೈರಲ್ ಆಗಿದೆ.
ಪೈಲಟ್ ಮೋಹಿತ್ ಟಿಯೋಟಿಯಾ ಅವರು ಇತ್ತೀಚೆಗೆ ಬ್ಯಾಂಕಾಕ್‌ಗೆ ತೆರಳುವ ವಿಮಾನದಲ್ಲಿ ಸಂತೋಷಕರ ಮತ್ತು ಮೋಜಿನ ಘೋಷಣೆ ಮಾಡಿದ್ದಾರೆ.
“ನನ್ನ ಪ್ರಯಾಣಿಕರು ಸಂತೋಷವಾಗಿರುವಾಗ ನನಗೆ ಸಂತೋಷವಾಗುತ್ತದೆ” ಎಂದು ಟಿಯೋಟಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಅವರ ವಿಶಿಷ್ಟವಾದ ಹಾಸ್ಯ ಶೈಲಿಯಲ್ಲಿ ಘೋಷಣೆ ಮಾಡುತ್ತಾ ವಿಮಾನದಲ್ಲಿ ಪ್ರಯಾಣಿಕರು ಹೇಗೆ ವರ್ತಿಸಬೇಕೆಂದು ಹೇಳಿದ್ದಾರೆ.
“ವಿಮಾನ ಹಾರಾಟದ ಸಮಯದಲ್ಲಿ ಪಾನ್ ಅಥವಾ ಗುಟ್ಕಾವನ್ನು ಯಾರೂ ಜಗಿಯಬಾರದು. ಏಕೆಂದರೆ ಇಲ್ಲಿ ಕಿಟಕಿಗಳು ತೆರೆಯುವುದಿಲ್ಲ ಮತ್ತು ಕ್ಯಾಬಿನ್ ಸಿಬ್ಬಂದಿಗೆ ಪಿಕ್-ಡಾನ್ ಇಲ್ಲ. ಇದಲ್ಲದೆ ಯಾರಾದರೂ ಬ್ಯಾಂಕಾಕ್ ಪ್ರಯಾಣದ ಬಗ್ಗೆ ನಿಮ್ಮ ಹೆಂಡತಿಗೆ ಸುಳ್ಳು ಹೇಳಿದ್ದೀರಾ ? ಯಾಕೆಂದರೆ ನೀವು ಮನೆಗೆ ವಾಪಸ್ ಬಂದಾಗ ಅವರು ನಿಮಗೆ ಬೈತಾರೆ” ಎಂದು ಪ್ರಯಾಣಿಕರನ್ನು ಅವರು ಉಲ್ಲಾಸದಿಂದ ಎಚ್ಚರಿಸುತ್ತಾರೆ.
ಈ ರೀತಿ ಹಾಸ್ಯಮಯವಾಗಿ ಘೋಷಣೆ ಮಾಡಿದ ಪೈಲಟ್ ಮಾತಿಗೆ ಪ್ರಯಾಣಿಕರು ನಗುತ್ತಾ ಚಪ್ಪಾಳೆ ತಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಕಳೆದ ವರ್ಷ ಸ್ಪೈಸ್‌ಜೆಟ್ ನಲ್ಲಿ ಪೈಲಟ್ ಮೋಹಿತ್ ಟಿಯೋಟಿಯಾ ತನ್ನ ಸೃಜನಾತ್ಮಕ ಪ್ರಕಟಣೆಯ ಮೂಲಕ ಜನರ ಹೃದಯವನ್ನು ಗೆದ್ದಿದ್ದರು. ದೆಹಲಿ-ಶ್ರೀನಗರ ವಿಮಾನದಲ್ಲಿ ಹಿಂದಿಯಲ್ಲಿ ಕಾವ್ಯಾತ್ಮಕ ಶೈಲಿಯಲ್ಲಿ ಘೋಷಣೆ ಮಾಡಿದಾಗ ಅವರ ಪ್ರತಿಭೆಯನ್ನ ಗುರುತಿಸಲಾಯಿತು.
https://youtu.be/V9wo8CRVEmA