ಬೆಂಗಳೂರು: ವಿಧಾನಸಭೆ ಚುನಾವಣೆ ಮತದಾನ ದಿನವಾದ ಮೇ 10ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸಂಚಾರ ಅವಧಿ ವಿಸ್ತರಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಮಧ್ಯರಾತ್ರಿ ವರೆಗೆ ವಿಸ್ತರಿಸಿದೆ. ಬೈಯ್ಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ, ವೈಟ್ಫೀಲ್ಡ್ ನಿಲ್ದಾಣಗಳಿಂದ ಕೊನೆಯ ರೈಲು ಸಂಚರಿಸಲಿವೆ.
ಈ ಮಾರ್ಗದ ರೈಲುಗಳು ಮೇ 11ರಂದು ಮಧ್ಯರಾತ್ರಿ 12.5ರವರೆಗೆ ಸಂಚರಿಸಲಿವೆ. ಮೆಜೆಸ್ಟಿಕ್ ನಿಂದ ಕೊನೆಯ ರೈಲಿನ ಸೇವೆ ಮಧ್ಯರಾತ್ರಿ 12:35ಕ್ಕೆ ಬೈಯ್ಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೆಯಿಂದ ಹೊರಡಲಿದೆ. ಬುಧವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.