HomeKarnatakaBIG NEWS: ಪ್ರಧಾನಿ ಮೋದಿ ರೋಡ್ ಶೋ ವೇಳೆ ಹನುಮಾನ್ ಚಾಲೀಸ ಪಠಣ; ಕೇರಳದ ಚಂಡೆ...

BIG NEWS: ಪ್ರಧಾನಿ ಮೋದಿ ರೋಡ್ ಶೋ ವೇಳೆ ಹನುಮಾನ್ ಚಾಲೀಸ ಪಠಣ; ಕೇರಳದ ಚಂಡೆ ವಾದ್ಯದ ಮೂಲಕ ಸ್ವಾಗತ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನ ಮಾತ್ರ ಬಾಕಿಯಿದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಎರಡನೇ ಹಂತದ ಅಬ್ಬರದ ರೋಡ್ ಶೋ ನಡೆಸಿದ್ದಾರೆ.

ನ್ಯೂ ತಿಪ್ಪಸಂದ್ರದಿಂದ ಟ್ರಿನಿಟಿ ಸರ್ಕಲ್ ವರೆಗೆ 6.5 ಕೀ.ಮೀ ವರೆಗೆ ರೋಡ್ ಶೋ ಸಾಗಲಿದೆ. ರೋಡ್ ಶೋ ನಡೆಯುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನೆರೆದಿದ್ದು, ಮೋದಿ ಮೋದಿ ಎಂದು ಜಯಘೋಷ ಕೂಗಿದ್ದಾರೆ. ಇನ್ನೊಂದೆಡೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹೂಮಳೆಗರೆದು ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ ಒಂದೆಡೆ ಕೇರಳದ ಕಲಾ ತಂಡ ಪ್ರಧಾನಿ ಮೋದಿಯವರನ್ನು ಚಂಡೆ ವಾದ್ಯದ ಮೂಲಕ ಸ್ವಾಗತಿಸಿದೆ.

ಇದೇ ವೇಳೆ ನೂರಾರು ಪಂಡಿತರು ಪ್ರಧಾನಿ ಮೋದಿ ರೋಡ್ ಶೋ ವೇಳೆ ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ. ಬಿಗಿ ಪೊಲಿಸ್ ಬಂದೋಬಸ್ತ್ ನಡುವೆ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಜನರತ್ತ ಕೈ ಬೀಸುತ್ತ ಸಾಗಿದ್ದು, ಟ್ರಿನಿಟಿ ಸರ್ಕಲ್ ನಲ್ಲಿ ರೋಡ್ ಶೋ ಮುಕ್ತಾಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular