HomeKarnatakaBIG NEWS: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಗ್ಯಾಂಗ್ ಸ್ಟರ್ ಬೆಂಬಲಿಗನಿಗೆ ಸ್ಥಾನ; ದೇಶ ದ್ರೋಹಿಗಳ...

BIG NEWS: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಗ್ಯಾಂಗ್ ಸ್ಟರ್ ಬೆಂಬಲಿಗನಿಗೆ ಸ್ಥಾನ; ದೇಶ ದ್ರೋಹಿಗಳ ಮೇಲೆ ಕೈ ನಾಯಕರಿಗೆ ಪ್ರೀತಿ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರಾಗಿ ಇಮ್ರಾನ್ ಪ್ರತಾಪ್ ಗರ್ಹಿ ಹೆಸರಿದೆ. ಇಮ್ರಾನ್ ಪ್ರತಾಪ್ ಗರ್ಹಿ ಉತ್ತರ ಪ್ರದೆಶದ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಬೆಂಬಲಿಗರ ಜೊತೆಗೆ ನನ್ನ ಗುರು ಎಂದು ಗರ್ಹಿ ಹೇಳಿಕೊಳ್ಳುತ್ತಿದ್ದ. ಇಂತವನನ್ನು ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕನನ್ನಾಗಿ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಮ್ರಾನ್ ಗರ್ಹಿ ಶಾಯರಿ ಬರೆಯುವ ಕವಿ, ಆತನ ಶಾಯರಿಗಳು ದೇಶ, ಸಮಾಜ ವಿರೋಧಿ. ಇಂತಹ ದೇಶದ್ರೋಹಿಗಳ ಮೇಲೆ ಕಾಂಗ್ರೆಸ್ ಗೆ ಬಹಳ ಪ್ರೀತಿ. ಗ್ಯಾಂಗ್ ಸ್ಟರ್ ಕಾಯ್ದೆಯಡಿ ಬಂಧನವಾದವರ ಜೊತೆ ಇಮ್ರಾನ್ ಗರ್ಹಿ ಸಂಪರ್ಕವಿದೆ. ಈತ ಟಿಪ್ಪು ಹೋರಾಟ ತಾರಕ್ಕೇರಿದ ಸಂದರ್ಭದಲ್ಲಿಯೂ ಕರ್ನಾಟಕ್ಕೆ ಬಂದು ಪ್ರಚೋದನಕಾರಿ ಭಾಷಣ ಮಾಡಿದ್ದ. ಇಂತವನನ್ನು ಸ್ಟಾರ್ ಪ್ರಚಾರಕನನ್ನಾಗಿಸಿರುವುದು ಖಂಡನೀಯ ಎಂದು ಕರಂದ್ಲಾಜೆ ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular