HomeIndiaಪತ್ನಿಗೆ ಕಚ್ಚಿದ್ದ ಹಾವನ್ನೂ ಆಸ್ಪತ್ರೆಗೆ ತಂದ ಪತಿರಾಯ....!

ಪತ್ನಿಗೆ ಕಚ್ಚಿದ್ದ ಹಾವನ್ನೂ ಆಸ್ಪತ್ರೆಗೆ ತಂದ ಪತಿರಾಯ….!

ತನ್ನ ಮಡದಿಗೆ ಹಾವೊಂದು ಕಚ್ಚಿದಾಗ ಗಂಡ ಹಾವನ್ನು ಆಸ್ಪತ್ರೆಗೆ ಕರೆತಂದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಜರುಗಿದೆ.

ಜಿಲ್ಲೆಯ ಸಫಿಪುರ ಕೊತ್ವಾಲಿ ಪ್ರದೇಶದ ಉಮರ್‌ ಅತ್ವಾ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕುಸುಮಾಗೆ ಹೆಬ್ಬಾವೊಂದು ಕಡಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೂಡಲೇ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ಬಳಿಕ ಈ ಘಟನೆ ಬಗ್ಗೆ ತಿಳಿದುಕೊಂಡ ಆಕೆಯ ಪತಿ ನರೇಂದ್ರ, ಹೆಬ್ಬಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾನೆ.

ತನ್ನ ಮಡದಿಗೆ ಯಾವ ಹಾವು ಕಚ್ಚಿದೆ ಎಂದು ತಿಳಿದುಕೊಂಡು ಅದರಂತೆ ಆಕೆಗೆ ಚಿಕಿತ್ಸೆ ಕೊಡಿಸಲು ಹೀಗೆ ಮಾಡಿದ್ದಾಗಿ ನರೇಂದ್ರ ಹೇಳಿಕೊಂಡಿದ್ದಾನೆ. ಮಹಿಳೆಯು ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

For Latest News Updates, Join Our Whatsapp Community🚩
RELATED ARTICLES

Most Popular