HomeKarnatakaಸತ್ಯಾತ್ಮತೀರ್ಥ ಶ್ರೀಪಾದಂಗಳ ಕಾರು ಅಪಘಾತ: ಸ್ವಾಮೀಜಿ ಸೇರಿ ಮೂವರಿಗೆ ಗಂಭೀರ ಗಾಯ

ಸತ್ಯಾತ್ಮತೀರ್ಥ ಶ್ರೀಪಾದಂಗಳ ಕಾರು ಅಪಘಾತ: ಸ್ವಾಮೀಜಿ ಸೇರಿ ಮೂವರಿಗೆ ಗಂಭೀರ ಗಾಯ

ಹುಬ್ಬಳ್ಳಿ: ಬೆಂಗಳೂರಿನ ಬಸವನಗುಡಿಯ ಉತ್ತರಾಧಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿಗಳ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭಸಿದ ಭೀಕರ ಅಪಘಾತದಲ್ಲಿ ಸ್ವಾಮೀಜಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಧಾರವಾಡದಿಂದ ಸವಣೂರಿಗೆ ತೆರಳುತ್ತಿದ್ದ ವೇಳೆ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಾಟರ್ ಪಾರ್ಕ್ ಸಮೀಪ ಫಾರ್ಚೂನರ್ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಸತ್ಯಾತ್ಮತೀರ್ಥ ಶ್ರೀಗಳು ಸೇರಿ ಮೂವರಿಗೆ ಗಾಯಗಳಾಗಿದ್ದು, ಯಾವುದೇ ಗಂಭೀರ ಅಪಾಯವಿಲ್ಲ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ತಕ್ಷಣ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಧಾರವಾಡ ಉತ್ತರಾಧಿಮಠದ ಸಿಇಒ ವಿದ್ಯಾಧೀಶಾಚಾರ್ಯ ಗುತ್ತಲ ಸ್ಪಷ್ಟನೆ ನೀಡಿದ್ದು, ಅಪಘಾತದ ಕುರಿತು ಹರಡುತ್ತಿರುವ ಊಹಾಪೋಹಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀಪಾದಂಗಳಿಗೆ ಸಣ್ಣ ಪ್ರಮಾಣದ ಗಾಯಗಳಗೈವೆ. ಭಕ್ತರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆ ಕ್ಯಾಂಟೀನ್ ತಿಂಡಿಯಲ್ಲಿ ಹಲ್ಲಿ ಪತ್ತೆ; ಕೇಸರಿಬಾತ್ ನಲ್ಲಿ ಇದ್ದ ಸತ್ತ ಹಲ್ಲಿ ಕಂಡು ಶಾಕ್ ಆದ ರೋಗಿ ಕುಟುಂಬ

ಹಾವೇರಿ: ಹಾವೇರಿ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ತಿಂಡಿಯಲ್ಲಿ ಹಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಸಾರ್ವಜನಿಕರು ಆಸ್ಪತ್ರೆಯ ಕ್ಯಾಂಟೀನ್ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿದ್ದ ರೋಗಿಯೊಬ್ಬರಿಗೆ ನೀಡಲಾಗಿದ್ದ ಉಪ್ಪಿಟ್ಟು- ಕೇಸರಿಬಾತ್ ತಿಡಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಿಂದ ಪಾರ್ಸಲ್ ತೆಗೆದುಕೊಂಡಿದ್ದ ಹೋಗಿದ್ದ ಕೇಸರಿ ಬಾತ್ ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ರೋಗಿ ಹಾಗೂ ಕುಟುಂಬಸ್ಥರು ಹೌಹಾರಿದ್ದಾರೆ.

ತಕ್ಷಣ ರೋಗಿಯ ಕುಟುಂಬದವರು ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿ, ಕ್ಯಾಂಟೀನ್ ಮಾಲೀಕರ ಗಮನಕ್ಕೆ ತಂದಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಕುಟುಂಬದವರು ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಲ್ಲಿ ತಿಂಡಿ ಸವಿದು, ವಾರ್ಡ್ ನಲ್ಲಿದ್ದ ರೋಗಿಗೆ ತಿಂಡಿ ಪಾರ್ಸಲ್ ತೆಗೆದುಕೊಂಡು ಹೋಗಿದ್ದರು. ಕ್ಯಾಂಟೀನ್ ನಿಂದ ತೆಗೆದುಕೊಂಡು ಹೋಗಿದ್ದ ಕೇಸರಿಬಾತ್ ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಶಾಕ್ ಆಗಿದ್ದಾರೆ.

ಈ ಬಗ್ಗೆ ಕ್ಯಾಂಟೀನ್ ಮಾಲೀಕರಿಗೆ ಕೇಳಿದರೆ ಏನೀ ಕಣ್ತಪ್ಪಿನಿಂದ ಹೀಗಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಆಕ್ರೋಶಗೊಂಡ ರೋಗಿ ಕುಟುಂಬದವರು, ಸಾರ್ವಜನಿಕರು ಕ್ಯಾಂಟೀನ್ ಒಳಗೆ ಪರಿಶೀಲಿಸಿದಾಗ ಕ್ಯಾಂಟೀನ್ ಸಂಪೂರ್ಣ ಅಸ್ವಚ್ಚತೆಯಿಂದ ಕೂಡಿದ್ದು ಎಲ್ಲಿ ನೋಡಿದ್ದರಲ್ಲಿ ಜಿಳರೆಗಳು ರಾಜಾರೋಷವಾಗಿ ಓಡಾಡುತ್ತಿರುವುದು, ಹುಳಗಳು ಇರುವುದು ಪತ್ತೆಯಾಗಿದೆ. ರೋಗಿಗಳಿಗೆ ಕೊಡುವ ಆಹಾರದ ಪ್ಲೇಟ್ ಗಳ ಮೇಲೂ ಜಿರಳೆಗಳು ಓಡಾಡುತ್ತಿದ್ದವು.

ಬಡ ರೋಗಿಗಳು ಅನಾರೋಗ್ಯದಿಂದ ಜೀವ ಉಳಿಸಿಕೊಳ್ಳು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ಗಳೇ ಜೀವ ತೆಗೆಯ್ವ ಹಂತದಲ್ಲಿದೆ ಅಷ್ಟರ ಮಟ್ಟಿಗೆ ಕ್ಯಾಂಟೀನ್ ನಲ್ಲಿ ಅಸ್ವಚ್ಚತೆ, ಜಿರಳೆ ಓಡಾಟ ಕಂಡುಬರುತ್ತಿದ್ದವು. ಇದರಿಂದ ಜನರು ರೊಚ್ಚಿಗೇಳುತ್ತಿದ್ದಂತ್ರೆ ಆಸ್ಪತ್ರೆಯ ಕ್ಯಾಂಟೀನ್ ಗೆ ಬೀಗ ಹಾಕಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular