HomeCrimeಮನುಕುಲ ತಲೆತಗ್ಗಿಸುವಂತಿದೆ ಈ ಘಟನೆ; ದಲಿತ ಹುಡುಗಿಯನ್ನ ಮದುವೆಯಾಗಿದ್ದಕ್ಕೆ ತಂದೆಯಿಂದ್ಲೇ ಮಗ, ತಾಯಿಯ ಹತ್ಯೆ

ಮನುಕುಲ ತಲೆತಗ್ಗಿಸುವಂತಿದೆ ಈ ಘಟನೆ; ದಲಿತ ಹುಡುಗಿಯನ್ನ ಮದುವೆಯಾಗಿದ್ದಕ್ಕೆ ತಂದೆಯಿಂದ್ಲೇ ಮಗ, ತಾಯಿಯ ಹತ್ಯೆ

ತಮಿಳುನಾಡಿನಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದು, ದಲಿತ ಯುವತಿಯನ್ನ ಮದುವೆಯಾಗಿದ್ದಕ್ಕೆ ತಂದೆಯೇ ತನ್ನ ಮಗ, ತಾಯಿಯನ್ನ ಹತ್ಯೆ ಮಾಡಿದ್ದು ಸೊಸೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಏಪ್ರಿಲ್ 14 ರಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಆರೋಪಿಯ ಮಗ ಮತ್ತು ತಾಯಿ ಸ್ಥಳದಲ್ಲೇ ಮೃತಪಟ್ಟರೆ, ಸೊಸೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಪ್ರಕಾರ ದಲಿತ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ಮಗ ಮದುವೆಯಾಗಿದ್ದು ನನಗೆ ಸಂತೋಷ ನೀಡಿರಲಿಲ್ಲ ಎಂದು ಆರೋಪಿ ಹೇಳಿದ್ದಾನೆ.

ವರನ ಕುಟುಂಬವು ದಲಿತ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಸಿದ್ಧವಿರಲಿಲ್ಲ. ಕುಟುಂಬದ ವಿರೋಧದ ಹೊರತಾಗಿಯೂ ದಂಪತಿಗಳು ಈ ವರ್ಷದ ಮಾರ್ಚ್‌ನಲ್ಲಿ ಮದುವೆಯಾಗಿ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.

ಎಪ್ರಿಲ್ 14 ರಂದು ವರನ ಅಜ್ಜಿ ತನ್ನ ಮನೆಗೆ ಭೇಟಿ ನೀಡುವಂತೆ ನವವಿವಾಹಿತರಿಗೆ ಆಹ್ವಾನವನ್ನು ನೀಡಿದ್ದರು. ನವಜೋಡಿಯ ಮದುವೆಗೆ ಇದ್ದ ವಿರೋಧ ಗೊತ್ತಿಲ್ಲದೇ ಆಕೆ ಮೊಮ್ಮಗನನ್ನ ಮನೆಗೆ ಆಹ್ವಾನಿಸಿದ್ದರು.

ಆಗ ಮದುವೆ ವಿಚಾರವಾಗಿ ಸಿಟ್ಟಿಗೆದ್ದ ವರನ ತಂದೆ ತನ್ನ ಸ್ವಂತ ಮಗ ಹಾಗೂ ತಾಯಿಯನ್ನು ಬರ್ಬರವಾಗಿ ಕಡಿದು ಕೊಂದು ಹಾಕಿದ್ದ. ಸೊಸೆಗೆ ತೀವ್ರ ಗಾಯಗಳಾಗಿದ್ದು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಬೇಕಾಯಿತು. ಈ ಘಟನೆಯು ಪ್ರದೇಶದಾದ್ಯಂತ ಬೆಚ್ಚಿಬೀಳಿಸಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular