ಸಾಮಾಜಿಕ ಜಾಲತಾಣದಲ್ಲಿ ಏನೇನೆಲ್ಲಾ ವಿಡಿಯೋ ನೋಡುತ್ತೀರಿ ಎಂದು ಹೇಳಲು ಬರುವುದಿಲ್ಲ. ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಜೊತೆಗೆ ನಿಂತಿದ್ದ ಮದುಮಗನ ಮೇಲೆ ಸ್ಪೀಕರ್ ಒಂದು ಬಿದ್ದ ವಿಡಿಯೋವೊಂದು ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಸ್ವಾತಿ ಚತುರ್ವೇದಿ ಶೇರ್ ಮಾಡಿದ್ದಾರೆ. ’ತೇರಿ ಓರೆ’ ಎಂಬ ರೊಮ್ಯಾಂಟಿಕ್ ಹಾಡು ಮೂಡಿ ಬರುತ್ತಿದ್ದ ಸ್ಪೀಕರ್ ಇದ್ದಕ್ಕಿದ್ದಂತೆ ಮದುಮಗನ ಮೇಲೆ ಬಿದ್ದಿದೆ.
“ಸಂಗೀತವೇ ನಿಮಗೆ ಜೋರಾಗಿ ಹೊಡೆದರೆ,” ಎಂದು ಪೋಸ್ಟ್‌ಗೆ ಕ್ಯಾಪ್ಷನ್ ಕೊಡಲಾಗಿದೆ. ಆನ್ಲೈನ್‌ನಲ್ಲಿ ಶೇರ್ ಆದಾಗಿನಿಂದ ಈ ವಿಡಿಯೋವನ್ನು 72 ಸಾವಿರ ಮಂದಿ ವೀಕ್ಷಿಸಿದ್ದು, ಮದುಮಗನ ಪಾಡನ್ನು ಕಂಡು ನೆಟ್ಟಿಗರು ’ಅಯ್ಯೋ ಪಾಪ’ ಎಂದು ಕಾಮೆಂಟ್ ಮಾಡಿದ್ದಾರೆ.
https://twitter.com/swatic12/status/1645820352088489988?ref_src=twsrc%5Etfw%7Ctwcamp%5Etweetembed%7Ctwterm%
Vo UDD ke gaya 🤣🤣🤣…usko Rasta mil gaya Khushi ka
— Bayzoo Bawra (@BayzooBawra) April 11, 2023
When DJ Guy is Bride EX.. 😹
— $@®w@® (@iamsarwarr) April 11, 2023

