HomeIndiaಈ ಮೀನುಗಾರನ ಬಲೆಗೆ ಬಿದ್ದಿದ್ದು ಅಂತಿಂಥಾ ಮೀನಲ್ಲ......!

ಈ ಮೀನುಗಾರನ ಬಲೆಗೆ ಬಿದ್ದಿದ್ದು ಅಂತಿಂಥಾ ಮೀನಲ್ಲ……!

ಪಶ್ಚಿಮ ಬಂಗಾಳದ ಹೌರಾದ ಬಳಿ ಇರುವ ಶಿವ್‌ಗಂಜ್‌ನ  ದಾಮೋದರ್‌ ನದಿಯಲ್ಲಿ ಬ್ಲ್ಯಾಕ್ ಕಾರ್ಪ್‌ ಮೀನೊಂದನ್ನು ಹಿಡಿದ ಮೃತ್ಯುಂಜಯರಿಗೆ ಭಾರೀ ಬಂಪರ್‌ ಖುಲಾಯಿಸಿದಷ್ಟು ಸಂತಸ ಆವರಿಸಿದೆ.

ಸೋಮವಾರ ಬೆಳಿಗ್ಗೆ ಮೀನು ಹಿಡಿಯಲು ತೆರಳಿದ್ದ ಮೃತ್ಯುಂಜಯರಿಗೆ ಸಿಕ್ಕ 19.6 ಕೆಜಿ ತೂಕದ ಈ ಮೀನು 5,000 ರೂಗಳಿಗೆ ಮಾರಾಟವಾಗಿದೆ. ಸಾಮಾನ್ಯವಾಗಿ 5ರಿಂದ 12 ಕೆಜಿ ತೂಕದ ಈ ಮೀನುಗಳು ಸಿಗುತ್ತವೆ. ಆದರೆ 19.6 ಕೆಜಿಯ ಮೀನು ಸಿಕ್ಕಿರುವುದು ಭಾರೀ ಅಪರೂಪದ ವಿಚಾರವಾಗಿದೆ.

ಇಲ್ಲಿನ ಶ್ಯಾಮಪುರದ ರೂಪನಾರಾಯಣ್ ನದಿಯಲ್ಲಿ 14 ಕೆಜಿ ತೂಕದ ’ಭೋಲಾ ಮೀನು’ ಸಿಕ್ಕಿದ್ದು, ಅದನ್ನು ಕೆಲವು ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಮೃತ್ಯುಂಜಯರ ಈ ಬೇಟೆ ಅವರ ಊರಿನಲ್ಲಿ ದೊಡ್ಡ ಸುದ್ದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular