HomeKarnatakaBIG NEWS: ಬಿಜೆಪಿ ನಿರ್ಧಾರಕ್ಕೆ ಸ್ವಾಗತ; ರಾಜಕಾರಣದಲ್ಲಿ ಯಾರ ವಿರುದ್ಧ ಯಾರು ಬೇಕಾದರೂ ನಿಲ್ಲಬಹುದು ಎಂದ...

BIG NEWS: ಬಿಜೆಪಿ ನಿರ್ಧಾರಕ್ಕೆ ಸ್ವಾಗತ; ರಾಜಕಾರಣದಲ್ಲಿ ಯಾರ ವಿರುದ್ಧ ಯಾರು ಬೇಕಾದರೂ ನಿಲ್ಲಬಹುದು ಎಂದ ಡಿ.ಕೆ.ಶಿವಕುಮಾರ್

ಶೃಂಗೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಆರ್.ಅಶೋಕ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ರಾಜಕಾರಣದಲ್ಲಿ ಯಾರೇ ಬಂದರೂ ಎದುರಿಸಬೇಕು, ಹೋರಾಡಬೇಕು ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜಕಾರಣದಲ್ಲಿ ಯಾರು ಯಾರ ವಿರುದ್ಧವಾದರೂ ಸ್ಪರ್ಧೆ ಮಾಡಬಹುದು. ಅಶೋಕ್ ಸ್ಪರ್ಧೆ ಮಾಡುವುದಾದರೆ ಅವರಿಗೆ ನನ್ನ ಸ್ವಾಗತ. ಬಿಜೆಪಿಯವರ ಈ ದೊಡ್ಡ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಶೀಘ್ರದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular