HomeKarnatakaಮತದಾರರಿಗೆ ಮುಖ್ಯ ಮಾಹಿತಿ: ಅಭ್ಯರ್ಥಿಗಳ ಮಾಹಿತಿ, ನೀತಿ ಸಂಹಿತೆ ದೂರು ಸಲ್ಲಿಸಲು ವಿಶೇಷ ಆಪ್

ಮತದಾರರಿಗೆ ಮುಖ್ಯ ಮಾಹಿತಿ: ಅಭ್ಯರ್ಥಿಗಳ ಮಾಹಿತಿ, ನೀತಿ ಸಂಹಿತೆ ದೂರು ಸಲ್ಲಿಸಲು ವಿಶೇಷ ಆಪ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗಾಗಿ ಮತದಾರರು ದೂರು ಸಲ್ಲಿಸಲು ಆಯೋಗದ ವತಿಯಿಂದ ಎರಡು ವಿಶೇಷ ಅಪ್ಲಿಕೇಶನ್ ಪರಿಚಯಿಸಲಾಗಿದೆ.

ನಿಮ್ಮ ಅಭ್ಯರ್ಥಿ ಬಗ್ಗೆ ತಿಳಿಯಿರಿ -ಕೆವೈಸಿ ಹಾಗೂ ಸಿ -ವಿಜಿಲ್ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆವೈಸಿ ಆಪ್ ಮೂಲಕ ಅಭ್ಯರ್ಥಿಗಳ ವಿವರಗಳನ್ನು ಸಾರ್ವಜನಿಕರು ಪಡೆಯಬಹುದು. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿತ ದೂರುಗಳು ಕಂಡು ಬಂದಲ್ಲಿ ಸಿ -ವಿಜಿಲ್ ಆಪ್ ನಲ್ಲಿ ಮತದಾರರು ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ ಕೆವೈಸಿ ಆಪ್ ಲಭ್ಯವಿದೆ. ಈ ಅಪ್ಲಿಕೇಶನ್ ನಲ್ಲಿ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿ ಸಿಗಲಿದ್ದು, ಮತದಾರರು ಅಭ್ಯರ್ಥಿಗಳ ಹಿನ್ನೆಲೆ ತಿಳಿಯಲು ಸಹಾಯಕವಾಗಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular