HomeKarnatakaBIG NEWS; ಕಾಂಗ್ರೆಸ್ ನವರು ಭಿಕ್ಷುಕರು; ಸಚಿವ ಆರ್. ಅಶೋಕ್ ವಾಗ್ದಾಳಿ

BIG NEWS; ಕಾಂಗ್ರೆಸ್ ನವರು ಭಿಕ್ಷುಕರು; ಸಚಿವ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕಂದಾಯ ಸಚಿವ ಆರ್. ಅಶೋಕ್, ಕಾಂಗ್ರೆಸ್ ನವರು ಭಿಕ್ಷುಕರು. ಕಾಂಗ್ರೆಸ್ ಪಕ್ಷ ಈಗ ಎಲ್ಲಿಯೂ ಇಲ್ಲದಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಅಶೋಕ್, ಮುಸ್ಲಿಂರ ಮೀಸಲಾತಿಯನ್ನು ಒಕ್ಕಲಿಗರಿಗೆ, ಲಿಂಗಾಯಿತರಿಗೆ ಹಂಚಿಕೆ ಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರಿಗೆ ಮುಸ್ಲಿಂರ ಬಗ್ಗೆ ಪ್ರೀತಿಯಿದೆ. ಯಾರದ್ದೋ ಮೀಸಲಾತಿ ಕಿತ್ತು, ಇನ್ಯಾರಿಗೋ ನೀಡಿದ್ದಾರೆ ಎನ್ನಲು ಇದನ್ನೆಲ್ಲ ಕೇಳಲು ನೀವ್ಯಾರು ? ನಿಮ್ಮ ಸರ್ಕಾರ ಇದ್ದಾಗ ನೀವು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ನಾವು ಮೀಸಲಾತಿ ಹಂಚಿಕೆ ಮಾಡಿದ್ದಕ್ಕೆ ಅವರಿಗೆ ಸಹಿಸಲು ಆಗುತ್ತಿಲ್ಲ. ಕಾಡೋದು, ಬೇಡೋದು ಸಿದ್ದರಾಮಯ್ಯ, ಡಿಕೆಶಿ ಮಾತ್ರ. ಕಾಂಗ್ರೆಸ್ ನವರು ಈಗ ಭಿಕ್ಷುಕರು ಇದ್ದಂತೆ. ಅವರಿಗೆ ಬೇರೆ ಚಾಯ್ಸ್ ಇಲ್ಲ. ಇಡೀ ದೇಶದಲ್ಲಿ ಅವರು ಎಲ್ಲಿದ್ದಾರೆ. ಎಲ್ಲಾ ರಾಜ್ಯಗಳಿಂದಲೂ ಅವರನ್ನು ಓಡಿಸಲಾಗಿದೆ. ಹಾಗಾಗಿ ಓಡ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular