HomeKarnatakaಕಲಬುರಗಿಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಕಲಬುರಗಿಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಕಲಬುರಗಿ: ಅನುಮಾನ ಎಂಬ ಪಿಶಾಚಿ ಒಮ್ಮೊ ತಲೆಗೆ ಹೊಕ್ಕರೆ ವಿಚಾರ ವಿವೇಚನೆಯನ್ನೇ ಮನುಷ್ಯ ಕಳೆದುಕೊಂಡು ಮೃಗನಂತೆ ವರ್ತಿಸುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತ್ನಿ ಮೇಲಿನ ಸಂಶಯಕ್ಕೆ ಪತಿ ಮಹಾಶಯನೊಬ್ಬ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಕಲಬುರಗಿ ನಗರದ ಶರಣಶಿರಸಗಿ ಬಳಿ ಈ ಘಟನೆ ನಡೆದಿದೆ. ರೇಣುಕಾ ಶಿಂಧೆ (38) ಪತಿಯಿಂದಲೇ ಕೊಲೆಯಾದ ಮಹಿಳೆ. ಕಳೆದ ಕೆಲ ವರ್ಷಗಳ ಹಿಂದೆ ಸಂಜಯ್ ಜೊತೆ ಮದುವೆಯಾಗಿ ಶರಣಸಿರಸಗಿ ಬಳಿ ವಾಸವಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ರೇಣುಕಾ ಬೇರೊಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿರಬಹುದು ಎಂಬ ಅನಗತ್ಯ ಸಂಶಯಕ್ಕೆ ಪದೇ ಪದೇ ಪತ್ನಿಯೊಂದಿಗೆ ಜಗಳವಡುತ್ತಿದ್ದ. ನಿನ್ನೆ ರಾತ್ರಿ ಸಹ ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಸಂಜಯ್, ರೇಣುಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪೊಲಿಸ್ ಠಾಣೆಯಲ್ಲಿಯೇ ಶಿವಸೇನೆ ನಾಯಕನ ಮೇಲೆ ಮಹಿಳೆಯಿಂದ ಮನಬಂದಂತೆ ಹಲ್ಲೆ

ಥಾಣೆ: ಹಣಕಾಸಿನ ವ್ಯವಹಾರದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಪೊಲೀಸ್‌ ಠಾಣೆಯಲ್ಲೇ ಮಹಿಳೆಯೊಬ್ಬಳು ಶಿವಸೇನೆಯ ಯುವ ನಾಯಕ ಸಿದ್ದೇಶ್ ಅಭಂಗೇ ಅವರ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ನಗರದ ಕೋಪ್ರಿ ಪೊಲೀಸ್ ಠಾಣೆಯಲ್ಲಿ ಈ ಹಲ್ಲೆ ಪ್ರಕರಣ ನಡೆದಿದೆ. ಅಭಂಗೇ ಮತ್ತು ಜವಳಿ ಉದ್ಯಮದಲ್ಲಿ ತೊಡಗಿರುವ ಕೆಲವು ಮಹಿಳೆಯರ ನಡುವಿನ ಹಣಕಾಸಿನ ವಿವಾದವೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ.

ಹಣಕಾಸಿನ ವಿವಾದ ಬಗೆಹರಿಸಿಕೊಳ್ಳಲು ಮಹಿಳೆಯರ ಗುಂಪು ಹಾಗೂ ಅಭಂಗೇ, ಕೋಪ್ರಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ, ಮಹಿಳಾ ಉದ್ಯಮಿಯೊಬ್ಬಳು ತನ್ನ ಸಹಚರನ ಜೊತೆ ಸೇರಿ ಅಭಂಗೇ ಮೇಲೆ ಹಲ್ಲೆ ನಡೆಸಿದ್ದಾಳೆ. ತಕ್ಷಣ ಠಾಣೆಯಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಯ ಬಳಿಕ ಆ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿತ್ತು ಸದ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular