HomeKarnatakaBIG NEWS: ಮಹೇಶ್ ಕುಮಟಳ್ಳಿಗೆ ಅಥಣಿ ಟಿಕೆಟ್ ಕೊಡಬೇಕು; ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಎಚ್ಚರಿಕೆ ನೀಡಿದ...

BIG NEWS: ಮಹೇಶ್ ಕುಮಟಳ್ಳಿಗೆ ಅಥಣಿ ಟಿಕೆಟ್ ಕೊಡಬೇಕು; ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಎಚ್ಚರಿಕೆ ನೀಡಿದ ರಮೇಶ್ ಜಾರಕಿಹೊಳಿ

ಬೆಳಗಾವಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಲಾಭಿ ಜೋರಾಗಿದ್ದು, ಈ ನಡುವೆ ಅಥಣಿ ಕ್ಷೇತ್ರದಿಂದ ಈ ಬಾರಿ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ.

ಅಥಣಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಮಹೇಶ್ ಕುಮಟಳ್ಳಿ ಹಾಗೂ ನಮ್ಮೆಲ್ಲರ ತ್ಯಾಗದಿಂದಾಗಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಮಹೇಶ್ ಕುಮಟಳ್ಳಿಯವರೇ ಅಥಣಿ ಬಿಜೆಪಿ ಅಭ್ಯರ್ಥಿ. ಇದರಲ್ಲಿ ಅನುಮಾನ ಬೇಡ ಎಂದರು.

ಅಥಣಿ ಬಿಜೆಪಿ ಟಿಕೆಟ್ ಗಾಗಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಸರತ್ತು ನಡೆಸಿರುವ ವಿಚಾರವಾಗಿ ಪರೋಕ್ಷವಾಗಿ ಕಿಡಿಕಾರಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಿಲ್ಲ, ಅವರಿಗೆ ಕನಿಷ್ಟ ಜ್ಞಾನವಾದರೂ ಇರಬೇಕು. ಅವರಿಗೆ ಇನ್ನೂ ಕೆಲ ವರ್ಷ ಪರಿಷತ್ ಸದಸ್ಯರಾಗಿ ಮುಂದುವರೆಯಲು ಅವಕಾಶವಿದೆ. ಆದರೂ ಟಿಕೆಟ್ ಕೇಳುತ್ತಿರುವುದು ಸರಿಯಲ್ಲ. ಅಥಣಿ ಟಿಕೆಟ್ ಮಹೇಶ್ ಕುಮಟಳ್ಳಿಗೆ ಕೊಡಬೇಕು. ಒಂದು ವೇಳೆ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ನಾನು ಗೋಕಾಕ್ ನಿಂದ ಸ್ಪರ್ಧೆ ಮಾಡಲ್ಲ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular