HomeKarnatakaBIG NEWS: ಮಾಜಿ ಸಚಿವ ಹೆಚ್.ಡಿ.ರೇವಣ್ಣ - ಶಾಸಕ ಶಿವಲಿಂಗೇಗೌಡರ ಆಡಿಯೋ ವೈರಲ್

BIG NEWS: ಮಾಜಿ ಸಚಿವ ಹೆಚ್.ಡಿ.ರೇವಣ್ಣ – ಶಾಸಕ ಶಿವಲಿಂಗೇಗೌಡರ ಆಡಿಯೋ ವೈರಲ್

ಹಾಸನ: ಅರಸಿಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಡಿಯೋ ವೈರಲ್ ಆಗಿದ್ದು, ಜೆಡಿಎಸ್ ತೊರೆಯದಂತೆ ರೇವಣ್ಣ ಮನವಿ ಮಾಡಿರುವ ಸಂಭಾಷಣೆ ಬಹಿರಂಗವಾಗಿದೆ.

ಹೆಚ್.ಡಿ.ರೇವಣ್ಣ, ಶಾಸಕ ಶಿವಲಿಂಗೇಗೌಡರಿಗೆ ಜೆಡಿಎಸ್ ಬಿಟ್ಟು ಹೊಗದಂತೆ ಮನವೊಲಿಕೆಗೆ ಯತ್ನಿಸಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ನಿಮ್ಮನ್ನು ಮತ್ತೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ಇದನ್ನು ಮೊನ್ನೆ ಸಹ ಹೇಳಿದ್ದೇನೆ ಎಂದು ರೇವಣ್ಣ ಶಿವಲಿಂಗೇಗೌಡರಿಗೆ ಭರವಸೆ ನೀಡಿದ್ದಾರೆ. ಈ ಮೂಲಕ ಪಕ್ಷ ತೊರೆಯದಂತೆ ಕಸರತ್ತು ಮಾಡಿದ್ದಾರೆ ಎನ್ನಲಾಗಿದೆ.

ಶಿವಲಿಂಗೇಗೌಡರು ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುವುದಕ್ಕೂ ಮೊದಲೇ ಈ ರಾಜೀ ಸಂಧಾನದ ಯತ್ನ ನಡೆದಿತ್ತು. ಜೆಡಿಎಸ್ ತೊರೆಯದಂತೆ ಶಿವಲಿಂಗೇಗೌಡರಿಗೆ ಭಾವನಾತ್ಮಕವಾಗಿಯೂ ಮನವೊಲಿಸುವ ಯತ್ನ ನಡೆಸಿದ್ದಾರೆ. ಆದರೆ ಶಿವಲಿಗೇಗೌಡರು ಜೆಡಿಎಸ್ ಬಿಡುವ ಬಗ್ಗೆಯಾಗಲಿ, ಬೇರೆ ಪಕ್ಷ ಸೇರ್ಪಡೆಯಾಗುವ ಬಗ್ಗೆಯಾಗಲಿ ಎಲ್ಲಿಯೂ ಮಾತನಾಡದೇ ಆಡಿಯೋದಲ್ಲಿ ಜಾಣ್ಮೆ ಮೆರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular