HomeIndiaನೃತ್ಯ ಮಾಡಲು ಬಂದಿದ್ದವರಿಗೆ ಹೆಚ್ಐವಿ ಪರೀಕ್ಷೆ; ಭಾರೀ ವಿವಾದಕ್ಕೀಡಾಯ್ತು ಜಿಲ್ಲಾಡಳಿತದ ನಡೆ

ನೃತ್ಯ ಮಾಡಲು ಬಂದಿದ್ದವರಿಗೆ ಹೆಚ್ಐವಿ ಪರೀಕ್ಷೆ; ಭಾರೀ ವಿವಾದಕ್ಕೀಡಾಯ್ತು ಜಿಲ್ಲಾಡಳಿತದ ನಡೆ

ಮಧ್ಯಪ್ರದೇಶದ ಪ್ರಸಿದ್ಧ ‘ಕರಿಲ ಮಾಟ ಮೇಳ’ಕ್ಕೆ ಆಗಮಿಸಿದ್ದ ನೃತ್ಯಗಾರ್ತಿಯರನ್ನು ಜಿಲ್ಲಾ ಆರೋಗ್ಯ ಇಲಾಖೆ ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ ವಿಲಕ್ಷಣ ಘಟನೆ ಅಶೋಕನಗರದಲ್ಲಿ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ಈ ವಿಷಯವನ್ನು ಪರಿಗಣಿಸಿದೆ. ಈ ಘಟನೆಯನ್ನು ನರ್ತಕಿಯರ ಘನತೆಯಿಂದ ಬದುಕುವ ಹಕ್ಕಿನ ಘೋರ ಉಲ್ಲಂಘನೆ ಎಂದು ವಿಶ್ಲೇಷಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಶೋಕನಗರದ ಮುಂಗೋಲಿ ತಹಸಿಲ್‌ನಿಂದ ಘಟನೆ ವರದಿಯಾಗಿದ್ದು, 10 ನರ್ತಕಿಯರಿಗೆ ಹೆಚ್ಐವಿ ಪರೀಕ್ಷೆ ಮಾಡಲಾಗಿದೆ ಎಂದು ವರದಿಯಾಗಿದೆ.

ಜಿಲ್ಲೆಯಲ್ಲಿ ಪ್ರತಿ ವರ್ಷ ರಂಗ ಪಂಚಮಿಯಂದು ಕರಿಲ ಮೇಳವನ್ನು ಆಯೋಜಿಸಲಾಗುತ್ತದೆ. ಈ ವರ್ಷ, ಇದನ್ನು ಭಾನುವಾರ ಆಯೋಜಿಸಲಾಗಿತ್ತು, ಇದರಲ್ಲಿ ವಿವಿಧ ಸ್ಥಳಗಳಿಂದ ಮಹಿಳಾ ನೃತ್ಯಗಾರರು ‘ರೈ’ ನೃತ್ಯ (ಬುಂದೇಲಖಂಡಿ ಜಾನಪದ ನೃತ್ಯ) ಪ್ರದರ್ಶಿಸಲು ಬಂದಿದ್ದರು.

ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ಈ ವಿಚಾರ ಬಂದ ತಕ್ಷಣ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕ್ರಮ ಕೈಗೊಂಡು ಈ ವಿಷಯದಲ್ಲಿ ಸ್ಪಷ್ಟೀಕರಣವನ್ನು ನೀಡುವ ಪತ್ರಿಕಾ ಟಿಪ್ಪಣಿಯನ್ನು ನೀಡಿತು.

ಎರಡು ದಿನಗಳ ಹಿಂದೆ 10 ನೃತ್ಯಗಾರರ ಪರೀಕ್ಷೆ ನಡೆಸಿರುವುದಾಗಿ ಹೇಳಿಕೊಂಡಿದ್ದ ಅಶೋಕನಗರದ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ (CMHO), ಡಾ. ನೀರಜ್ ಛಾರಿ ವಿಷಯ ಬೆಳಕಿಗೆ ಬಂದ ನಂತರ ತಮ್ಮ ಹೇಳಿಕೆಗೆ ಯು-ಟರ್ನ್ ತೆಗೆದುಕೊಂಡಿದ್ದಾರೆ.

ವಿಷಯ ಉಲ್ಬಣಗೊಂಡ ನಂತರ ಪ್ರತಿಪಕ್ಷ ಕಾಂಗ್ರೆಸ್ ಕೂಡ, ಸರ್ಕಾರವು ಮಹಿಳೆಯರ ಘನತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular