HomeKarnatakaBIG NEWS: ಹಾಲಿ ಶಾಸಕರಿಗೆ BSY ಬಿಗ್ ಶಾಕ್; 4 ರಿಂದ 6 ಮಂದಿಗೆ ಕೈ...

BIG NEWS: ಹಾಲಿ ಶಾಸಕರಿಗೆ BSY ಬಿಗ್ ಶಾಕ್; 4 ರಿಂದ 6 ಮಂದಿಗೆ ಕೈ ತಪ್ಪಲಿದೆ ಟಿಕೆಟ್…!

ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಹಾಲಿ ಬಿಜೆಪಿ ಶಾಸಕರುಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ನಾಲ್ಕರಿಂದ ಆರು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಲಿದ್ದು, ಇನ್ನುಳಿದಂತೆ ಬಹುತೇಕ ಎಲ್ಲರಿಗೂ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದಿದ್ದಾರೆ.

ಹೀಗಾಗಿ ಯಾವ ಶಾಸಕರುಗಳಿಗೆ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂಬ ಕುತೂಹಲ ಈಗ ಮೂಡಿದೆ. ಇದು ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಹಾಲಿ ಶಾಸಕರುಗಳ ಎದೆಯಲ್ಲಿ ಢವ ಢವ ಎನ್ನುವಂತೆ ಮಾಡಿದ್ದು, ಒಂದೊಮ್ಮೆ ಟಿಕೆಟ್ ಕೈ ತಪ್ಪಿದರೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular