HomeCrime16 ವರ್ಷದ ಗೆಳತಿ ಮೇಲೆ ಗುಂಡು ಹಾರಿಸಿದ ಸ್ನೇಹಿತ....!

16 ವರ್ಷದ ಗೆಳತಿ ಮೇಲೆ ಗುಂಡು ಹಾರಿಸಿದ ಸ್ನೇಹಿತ….!

ಯುವಕನೊಬ್ಬ ತನ್ನ 16 ವರ್ಷದ ಗೆಳತಿ ಮೇಲೆ ಗುಂಡು ಹಾರಿಸಿರುವ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಸೋಮವಾರ ಸಂಜೆ ಈಶಾನ್ಯ ದೆಹಲಿಯ ನಂದಗಿರಿ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ನೆರೆಮನೆಯಲ್ಲಿ ವಾಸವಾಗಿರುವ ಆಕೆಯ ಗೆಳೆಯ ಕಾಸೀಂ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಬಾಲಕಿಯನ್ನು ಕೂಡಲೇ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತ್ಯಕ್ಷದರ್ಶಿಗಳ ಪ್ರಕಾರ ನಂದಗಿರಿ ಏರಿಯಾದ ಸುಭಾಷ್ ಪಾರ್ಕ್ ಗೆ ಬಾಲಕಿ ಹಾಗೂ ಆಕೆಯ ಸ್ನೇಹಿತ ಬಂದಿದ್ದು, ಯಾವುದೋ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ ಅಂತಿಮವಾಗಿ ಯುವಕ ಗುಂಡು ಹಾರಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆರೋಪಿ ಪತ್ತೆಗೆ ಬಲೆ ಬೀಸಿದ್ದು, ಆತನ ಬಂಧನವಾದ ಬಳಿಕ ಕೃತ್ಯಕ್ಕೆ ಕಾರಣವೇನು ಎಂಬುದರ ಮಾಹಿತಿ ಲಭ್ಯವಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular