HomeInternationalBIG NEWS: ಅಮೆರಿಕಾದಲ್ಲಿ ನೆಲಕ್ಕಪ್ಪಳಿಸಿದ ಖಾಸಗಿ ವಿಮಾನ; ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ಸಾವು

BIG NEWS: ಅಮೆರಿಕಾದಲ್ಲಿ ನೆಲಕ್ಕಪ್ಪಳಿಸಿದ ಖಾಸಗಿ ವಿಮಾನ; ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ಸಾವು

4 ಸೀಟಿನ ಖಾಸಗಿ ವಿಮಾನ ಒಂದು ಪೈಲೆಟ್ ನಿಯಂತ್ರಣ ತಪ್ಪಿ, ನೆಲಕ್ಕೆ ಅಪ್ಪಳಿಸಿದ ಪರಿಣಾಮ ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ ಆಕೆಯ ಪುತ್ರಿ ಹಾಗೂ ಪೈಲೆಟ್ ತೀವ್ರವಾಗಿ ಗಾಯಗೊಂಡಿರುವ ಘಟನೆ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆದಿದೆ.

63 ವರ್ಷದ ರೋಮಾ ಗುಪ್ತಾ ಸಾವನ್ನಪ್ಪಿದ್ದು, ಅವರ ಪುತ್ರಿ ರೀವಾ ಗುಪ್ತಾ ಹಾಗೂ ವಿಮಾನದ ಪೈಲೆಟ್ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಲನೆಯಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡುವ ವಿಮಾನ ಇದಾಗಿದ್ದು, ಕಲಿಕೆಯ ಮಾಹಿತಿಗಳನ್ನು ನೀಡಲಾಗುತ್ತಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ತಲೆದೋರಿದ ಪರಿಣಾಮ ಪೈಲೆಟ್ ನಿಯಂತ್ರಣ ತಪ್ಪಿದೆ. ವಿಮಾನ ಜನವಸತಿ ಪ್ರದೇಶದಲ್ಲಿ ಬೀಳುವ ಸಾಧ್ಯತೆ ಇತ್ತಾದರೂ ಸಮಯ ಪ್ರಜ್ಞೆ ಮೆರೆದ ಪೈಲೆಟ್, ನಿರ್ಜನ ಪ್ರದೇಶದತ್ತ ಕೊಂಡೊಯ್ದಿದ್ದರು. ರೋಮಾ ಗುಪ್ತ ಅವರ ಪುತ್ರಿ ರೀವಾ ಗುಪ್ತಾ ಹಾಗೂ ಪೈಲೆಟ್ ತೀವ್ರ ಸುಟ್ಟ ಗಾಯಗಳಿಂದ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular