
ಇಂತಹದೊಂದು ಘಟನೆ ಮಧ್ಯಪ್ರದೇಶದ ಇಂದೋರಿನ ತೇಜಾಜಿ ನಗರ ಪ್ರದೇಶದಲ್ಲಿ ಗುರುವಾರದಂದು ನಡೆದಿದೆ. ಕೋಚಿಂಗ್ ಕ್ಲಾಸಿಗೆ ತೆರಳಿದ್ದ ಈತ ಬಳಿಕ ತನ್ನ ಗೆಳತಿಗೆ ಕರೆ ಮಾಡಿ ಕರೆಸಿಕೊಂಡಿದ್ದು, ಇಬ್ಬರೂ ಬೆಳಗಿನ ಜಾವ 3:30ರ ಸುಮಾರಿನಲ್ಲಿ ಫ್ಲವರ್ ಟೌನ್ಶಿಪ್ ಬಳಿ ಕಾರಿನಲ್ಲಿ ಕುಳಿತಿದ್ದರು.
ಈ ವೇಳೆ ರೌಂಡ್ಸ್ ಬಂದ ಪೊಲೀಸರು ಕಾರಿನ ಕಿಟಕಿ ಬಡಿದಿದ್ದು ಅವರನ್ನು ಕಾಣುತ್ತಲೇ ಭಯಗೊಂಡ ಆತ ತಪ್ಪಿಸಿಕೊಳ್ಳಲು ಕಾರನ್ನು ನುಗ್ಗಿಸಿದ್ದಾನೆ. ಇದರ ಪರಿಣಾಮ ಪೇದೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ನಡುವೆ ಹೇಗೋ ಎಸ್ಕೇಪ್ ಆದ ವಿದ್ಯಾರ್ಥಿ ಹೈವೆಯಲ್ಲಿ ಕಾರು ಬಿಟ್ಟು ಮನೆಗೆ ಹೋಗಿದ್ದಾನೆ.
ನಂತರ ಕಾರಿನ ಮಾಲೀಕರ ವಿವರವನ್ನು ಆರ್‌ಟಿಓ ಅಧಿಕಾರಿಗಳ ಬಳಿ ಪಡೆದ ಪೊಲೀಸರು ಪಿಯುಸಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಈತ ಮನೆಯಲ್ಲಿ ಸುಳ್ಳು ಹೇಳಿ ಗೆಳತಿ ಜೊತೆ ಹೊರಗೆ ಬಂದು ಈಗ ಅವಾಂತರ ಮಾಡಿಕೊಂಡಿದ್ದಾನೆ.

