HomeIndiaಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಸಪ್ನಾ ಗಿಲ್ ಯಾರು ಗೊತ್ತಾ ? ಇಲ್ಲಿದೆ...

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಸಪ್ನಾ ಗಿಲ್ ಯಾರು ಗೊತ್ತಾ ? ಇಲ್ಲಿದೆ ವಿವರ

ಬುಧವಾರ ರಾತ್ರಿ ಮುಂಬೈನ ಸಾಂತಾಕ್ರೂಸ್ ಪ್ರದೇಶದಲ್ಲಿರುವ ಐಷಾರಾಮಿ ರೆಸ್ಟೋರೆಂಟ್ ಒಂದರ ಮುಂದೆ ಕ್ರಿಕೆಟಿಗ ಪೃಥ್ವಿ ಶಾ ಮತ್ತವರ ಸ್ನೇಹಿತನ ಮೇಲೆ ಕೆಲವರು ಹಲ್ಲೆ ನಡೆಸಿದ್ದು, ಈ ಸಂಬಂಧ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅವರುಗಳನ್ನು ಬಂಧಿಸಿದ್ದಾರೆ.

ಬಂಧಿತರ ಪೈಕಿ ಸಪ್ನಾ ಗಿಲ್ ಸಹ ಒಬ್ಬರಾಗಿದ್ದು, ಚಂಡಿಘಡ ಮೂಲದ ಈಕೆ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಸಪ್ನಾ ಗಿಲ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 2,19,000 ಮಂದಿ ಫಾಲೋವರ್ ಗಳಿದ್ದಾರೆ.

ಈಕೆ ಭೋಜಪುರಿ ಚಿತ್ರಗಳಲ್ಲೂ ಸಹ ನಟಿಸಿದ್ದು, ಹೆಸರಾಂತ ನಟರಾದ ರವಿ ಕಿಶನ್, ದಿನೇಶ್ ಲಾಲ್ ಯಾದವ್ ಮೊದಲಾದವರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫ್ಯಾಷನ್ ಫೋಟೋಗಳು, ಡಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಶಿ ಅಮರನಾಥ್, ನಿರುವಾ ಚಲಾಲ್ ಲಂಡನ್ ಚಿತ್ರಗಳ ಜೊತೆಗೆ ಇತ್ತೀಚೆಗಷ್ಟೇ ಅಂದರೆ 2021 ರಲ್ಲಿ ಬಿಡುಗಡೆಯಾದ ಮೇರಾ ವತನ್ ನಲ್ಲಿ ಸಪ್ನಾ ಗಿಲ್ ಕಾಣಿಸಿಕೊಂಡಿದ್ದಾರೆ.

ಬುಧವಾರ ರಾತ್ರಿ ಸಪ್ನಾ ಗಿಲ್ ತನ್ನ ಸ್ನೇಹಿತರ ಜೊತೆ ಡಿನ್ನರ್ ಗೆಂದು ರೆಸ್ಟೋರೆಂಟ್ ಗೆ ಹೋದಾಗ ಅವರುಗಳಿಗೆ ತಮ್ಮ ಗೆಳೆಯನ ಜೊತೆ ಬರುತ್ತಿದ್ದ ಪೃಥ್ವಿ ಶಾ ಎದುರಾಗಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಇವರುಗಳು ಮುಂದಾಗಿದ್ದು ಅದಾದ ಬಳಿಕವೂ ಮತ್ತಷ್ಟು ಫೋಟೋಗಳಿಗೆ ಬೇಡಿಕೆ ಇಟ್ಟಾಗ ಪೃಥ್ವಿ ಶಾ ನಿರಾಕರಿಸಿದ್ದಾರೆ.

ಹೀಗಾಗಿ ಅವರು ಬರುವುದನ್ನೇ ಕಾಯುತ್ತಿದ್ದ ಸಪ್ನಾ ಗಿಲ್ ಮತ್ತವರ ಸ್ನೇಹಿತರು ಪೃಥ್ವಿ ಶಾ ಜೊತೆ ಜಗಳ ತೆಗೆದು ಬೇಸ್ ಬಾಲ್ ಬ್ಯಾಟ್ ನಿಂದ ಹೊಡೆಯಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular