HomeIndia2014 ಕ್ಕೂ ಮುನ್ನ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 609 ನೇ ಸ್ಥಾನದಲ್ಲಿದ್ದ ಅದಾನಿ 2ನೇ ಸ್ಥಾನಕ್ಕೆ...

2014 ಕ್ಕೂ ಮುನ್ನ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 609 ನೇ ಸ್ಥಾನದಲ್ಲಿದ್ದ ಅದಾನಿ 2ನೇ ಸ್ಥಾನಕ್ಕೆ ಬಂದಿದ್ದು ಹೇಗೆ ? ಲೋಕಸಭೆಯಲ್ಲಿ ರಾಹುಲ್ ಪ್ರಶ್ನೆ

2014 ಕ್ಕೂ ಮುನ್ನ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅಲ್ಪ ಅವಧಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದು ಹೇಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಮಾತನಾಡುತ್ತಿದ್ದ ಅವರು, 2014ರಲ್ಲಿ ನರೇಂದ್ರ ಮೋದಿಯವರು ದೆಹಲಿಗೆ ಬಂದ ಬಳಿಕ ಹೀಗೆಲ್ಲ ಬೆಳವಣಿಗೆ ನಡೆದಿದೆ ಎಂದು ಆರೋಪಿಸಿದರಲ್ಲದೆ, ಅದಾನಿ ಕೂಡ ಮೋದಿಯವರ ರಾಜಕೀಯ ಏಳಿಗೆಗೆ ಕಾರಣರಾದರು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶದ ಯಾವುದೇ ಭಾಗಕ್ಕೆ ಹೋದರೂ ಈಗ ಅದಾನಿಯದ್ದೇ ಸಾಮ್ರಾಜ್ಯವಾಗಿದೆ. ಏರ್ಪೋರ್ಟ್, ಬಂದರು ಸೇರಿದಂತೆ ಎಲ್ಲವನ್ನು ಸಹ ಅದಾನಿ ಸಮೂಹಕ್ಕೆ ಧಾರೆ ಎರೆಯಲಾಗಿದೆ ಎಂದು ಹೇಳಿದ ರಾಹುಲ್ ಗಾಂಧಿ, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಕಿಡಿ ಕಾರಿದರು.

For Latest News Updates, Join Our Whatsapp Community🚩
RELATED ARTICLES

Most Popular