
23 ವರ್ಷದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ T20I ನಲ್ಲಿ ಅವರು ಈ ಸಾಧನೆ ಮಾಡಿದರು.
ಆದರೆ, ಶುಬ್ಮನ್ ಗಿಲ್ ಹೊರತುಪಡಿಸಿ, ಜನರ ಗಮನ ಮತ್ತೊಬ್ಬ ವ್ಯಕ್ತಿಯ ಮೇಲಿತ್ತು. ಅದು ಸ್ಟ್ಯಾಂಡ್‌ನಲ್ಲಿ ಹುಡುಗಿಯೊಬ್ಬಳು ಫಲಕವೊಂದನ್ನು ಹಿಡಿದು ನಿಂತಿದ್ದಳು. ಅದರಲ್ಲಿ “ಟಿಂಡರ್, ಶುಭಮನ್ ಸೆ ಮ್ಯಾಚ್ ಕರದೋ” (ಟಿಂಡರ್…… ಶುಭಮನ್ ಅವರಿಂದ ಮ್ಯಾಚ್ ಮಾಡಿಸಿ) ಎಂದು ಬರೆಯಲಾಗಿತ್ತು.
ಈಕೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ಗಾಗಿ ಈ ಜಾಹೀರಾತು ಪ್ರಚಾರ ಎನ್ನುವುದು ತಿಳಿದುಬಂದಿದೆ. ಏಕೆಂದರೆ ಟಿಂಡರ್ ಎನ್ನುವುದು ಡೇಟಿಂಗ್ ಆ್ಯಪ್. ಇದರ ಪ್ರಚಾರ ಮಾಡುವ ಮೂಲಕ ಯುವತಿ ಶುಭಮನ್ ಅವರನ್ನು ಆಹ್ವಾನಿಸಿದ್ದಾಳೆ. ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಈ ಫೋಟೋ ಶೇರ್ ಮಾಡಿಕೊಂಡಿದ್ದು, ಶುಭಮನ್ ಅವರನ್ನು ಆ್ಯಪ್ಗೆ ಆಹ್ವಾನಿಸಿದ್ದಾರೆ.
ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿದ ಶುಭಮನ್ ಅವರು, ಉಮೇಶ್ ಯಾದವ್ ಡೇಟಿಂಗ್ ಆ್ಯಪ್ ಜಾಯಿನ್ ಆಗಿದ್ದು, ಈಗ ನನ್ನನ್ನೂ ಆಹ್ವಾನಿಸುತ್ತಿದ್ದಾರೆ ಎಂದಿದ್ದಾರೆ.
Poora Nagpur bol raha hai, @ShubmanGill ab toh dekh le pic.twitter.com/9iaW2BBtZY
— Umesh Yaadav (@y_umesh) February 3, 2023
Dekh toh liya, ab tum dekho theek se 💁♂️@Tinder_India made me do it 🔥#TinderIndia #ad pic.twitter.com/DY6YSuWG6w
— Shubman Gill (@ShubmanGill) February 4, 2023
https://twitter.com/LeoMessi_P/status/1621908717234184192?ref_src=twsrc%5Etfw%7Ctwcamp%5Etweetembed%7Ctwterm%5E1621908717234184192%7Ctwgr%5E4624cd56c13671f23b0599be11bbbfa1fa7acabd%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fab-tum-dekho-theek-se-shubman-gill-joins-tinder-in-response-to-girls-viral-request-2330703-2023-02-05

