HomeEntertainmentಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶರಣ್

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶರಣ್

ನಟ ಶರಣ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1996 ರಲ್ಲಿ ತೆರೆಕಂಡ ರಮೇಶ್ ಅರವಿಂದ್ ನಟನೆಯ ‘ಕರ್ಪೂರದ ಗೊಂಬೆ’ ಚಿತ್ರದ ಮೂಲಕ ಶರಣ್ ತಮ್ಮ ಸಿನಿ ಪ್ರಯಾಣ ಆರಂಭಿಸಿದರು.

ನಂತರ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದರು.  ಕಾಮಿಡಿ ಕಲಾವಿದನಾಗಿ ಪ್ರೇಕ್ಷಕರ ಗಮನ ಸೆಳೆದಿದ್ದ ಶರಣ್ ಇತ್ತೀಚಿಗೆ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟ ಶರಣ್ 2014 ರಲ್ಲಿ ನಂದ ಕಿಶೋರ್ ನಿರ್ದೇಶನದ ಕಾಮಿಡಿ ಪ್ರಧಾನಾಧಾರಿತ ‘ವಿಕ್ಟರಿ’ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡರು. ನಂತರ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಶರಣ್ ಇತ್ತೀಚೆಗೆ ‘ಅವತಾರ ಪುರುಷ’ ಪಾರ್ಟ್ 2 ನಲ್ಲಿ ಬಿಜಿಯಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿಮಾ ಕಲಾವಿದರು ನಟ ಶರಣ್ ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular