
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸುಧಾಕರ್ ಗೆ ನಮ್ಮ ಪಕ್ಷವೇ ರಾಜಕೀಯ ಜೀವನ ಕೊಟ್ಟಿದ್ದು. ನಮ್ಮ ವಿರುದ್ಧ ಸುಧಾಕರ್ 35 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ಆರೋಪಿಸಿದ್ದಾರೆ. ಪಾಪ ಸುಧಾಕರ್ ಗೆ ಸಿಎಜಿ ವರದಿ ಅರ್ಥ ಮಾಡಿಕೊಳ್ಳಲು ಆಗಿಲ್ಲ ಎಂದು ಗುಡುಗಿದರು.
ಕೋವಿಡ್ ಸಮಯದಲ್ಲಿ ಹಣ ಹೊಡೆದಿದ್ದಕ್ಕೆ ಮಾಸ್ಟರ್ ಇವರೇ. ಕೊರೊನಾ ಟೈಂ ನಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ. ಆರೋಗ್ಯ ಇಲಾಖೆಯಲಿ 3 ಸಾವಿರ ಕೋಟಿ ಹಗರಣ ಆದ ವರದಿ ಇದೆ. ಆಲಿಬಾಬ & 40 ಜನ ಕಳ್ಳರ ಗುಂಪಿನಲ್ಲಿ ಸುಧಾಕರ್ ಕೂಡ ಸದಸ್ಯ ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಸುಧಾಕರ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

