alex Certify ‘ಬೆಳ್ಳುಳ್ಳಿ’ ಸೇವಿಸುವುದರಿಂದ ಇದೆ ಶರೀರಕ್ಕೆ ಸಾಕಷ್ಟು ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೆಳ್ಳುಳ್ಳಿ’ ಸೇವಿಸುವುದರಿಂದ ಇದೆ ಶರೀರಕ್ಕೆ ಸಾಕಷ್ಟು ಪ್ರಯೋಜನ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ.

* ಬೆಳ್ಳುಳ್ಳಿಯ ಎಸಳನ್ನು ಅಗೆದು ತಿಂದರೆ ಅಥವಾ ರಸವನ್ನು ಸೇವಿಸಿದರೂ ಮೂತ್ರ ವಿಸರ್ಜನೆಯಲ್ಲಿ ಉರಿ ಕಡಿಮೆ ಆಗುತ್ತದೆ.

* ಜೇನಿನೊಂದಿಗೆ ಸ್ವಲ್ಪ ಪ್ರಮಾಣದ ಬೆಳ್ಳುಳ‍್ಳಿ ರಸವನ್ನು ಬೆರೆಸಿ ಸೇವಿಸಿದರೆ ಕೆಮ್ಮು, ನೆಗಡಿ, ಅಲರ್ಜಿ ಮಾಯವಾಗುತ್ತವೆ.

* ಕೂದಲು ಬೆಳ್ಳಗಾಗಿದ್ದರೆ ಸ್ನಾನಕ್ಕೆ ಮುನ್ನ ಬೆಳ್ಳುಳ್ಳಿ ರಸವನ್ನು ತೆಲೆಗೆ ಲೇಪಿಸಿಕೊಂಡು ಒಣಗಿದ ಬಳಿಕ ಸ್ನಾನ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

* ದಿನವು ಬಿಸಿ ಹಾಲಿನಲ್ಲಿ ಬೆಳ್ಳುಳ್ಳಿ ರಸವನ್ನು ಬೆರೆಸಿ ಕುಡಿದರೆ ಎದೆ ನೋವು, ಮೂರ್ಚೆ ರೋಗಗಳು ನಿಧಾನವಾಗಿ ಕಡಿಮೆ ಆಗುತ್ತದೆ.

* ಪಾರ್ಶ್ವವಾಯುವಿನಿಂದ ಬಳಲುವವರು ದಿನವು ಬೆಳ್ಳುಳ್ಳಿ ರಸವನ್ನು ಬಳಸಿದರೆ ರಕ್ತ ಪ್ರಸರಣ ಚೆನ್ನಾಗಿ ನಡೆದು ನಿರ್ಜೀವಗೊಂಡ ಭಾಗಗಳು ಪುನಃ ಬಲವನ್ನು ಹೆಚ್ಚಿಸಿಕೊಳ್ಳುತ್ತದೆ. ಹಾಗೂ ಅಂಗೈ ಅಂಗಾಲಿನ ಕೊಬ್ಬು ಕಡಿಮೆಯಾಗುತ್ತದೆ.

* ಒಂದು ಗ್ಲಾಸಿನಲ್ಲಿ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ನಾಲ್ಕು ಹನಿ ಬೆಳ್ಳುಳ‍್ಳಿ ರಸವನ್ನು ಹಾಕಿ ಕೆಮ್ಮು ಇರುವ ಚಿಕ್ಕ ಮಕ್ಕಳಿಗೆ ನೀಡಿದರೆ ಕೆಮ್ಮು ನಿವಾರಣೆ ಆಗುತ್ತದೆ.

* ಶುದ್ಧವಾದ ರಕ್ತ ಪ್ರಸಾರವನ್ನು ಉಂಟು ಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್, ಸಕ್ಕರೆ ವ್ಯಾಧಿಯನ್ನು ನಿವಾರಿಸುತ್ತದೆ. ಶರೀರದ ಕೊಬ್ಬು, ಹೊಟ್ಟೆಯ ಉಬ್ಬರವನ್ನು ಇಲ್ಲವಾಗಿಸುತ್ತದೆ. ಚರ್ಮದ ಸಮಸ್ಯೆಯನ್ನು ಪರಿಹರಿಸುತ್ತದೆ.

* ಬೆಳ್ಳುಳ್ಳಿ ಪ್ರತಿ ದಿನ ಬಳಸಿದರೆ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...