HomeKarnatakaBIG NEWS: ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್

BIG NEWS: ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್

ಹಾವೇರಿ: ರಾಜ್ಯದ ಕೆಲ ಶಾಸಕರು ತಮ್ಮನ್ನೇ ಮಾರಿಕೊಂಡಿದ್ದಾರೆ. ಬಿಜೆಪಿಯ ಒಬ್ಬ ಸಚಿವ ಪೊಲೀಸ್ ಆಗಿದ್ದಾಗ ಜನ ಹೊಡೆದಿದ್ದರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೆಸರೇಳದಯೇ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ

ಹಾವೇರಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಬಿಜೆಪಿಯ ಓರ್ವ ಸಚಿವ ಪೊಲೀಸ್ ಆಗಿದ್ದಾಗ ಯಶವಂತಪುರದ ಜನ ಚಪ್ಪಲಿಯಲ್ಲಿ ಹೊಡೆದಿದ್ದರು. ಇನ್ನೇನು ಕೆಲಸದಿಂದ ತೆಗಿತಾರೆ ಅಂತ ಗೊತ್ತಾಯ್ತು ಫಿಲ್ಮ್ ಮಾಡಿದರು. ಅವರ ಫಿಲ್ಮ್ ಒಂದು ವಾರ ಕೂಡ ಓಡಲಿಲ್ಲ. ಆದರೆ ನಾನು ಮಹಾನ್ ಚಿತ್ರನಟ ಎಂದು ಜನರ ಮುಂದೆ ಹೇಳಿದರು. ಮಹಾನ್ ನಟ ಎಂದು ಹೇಳಿ ರಾಜಕೀಯಕ್ಕೆ ಬಂದು ಶಾಸಕನಾದ್ರು. ದುಡ್ಡಿಗಾಗಿ ತಮ್ಮನ್ನು ತಾವು ಮಾರಿಕೊಂಡವರು ಈ ಜಿಲ್ಲೆಯ ಶಾಸಕರು ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದರೂ ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿಲ್ಲ. ಹಾವೇರಿಯ ಜಿಲ್ಲೆಯ ಬಹುತೇಕ ರಸ್ತೆಗಳು ಹಾಳಾಗಿವೆ ಅದನ್ನೂ ಅಭಿವೃದ್ಧಿ ಮಾಡಿಲ್ಲ. ಜಿಲೆಯಲ್ಲಿ 250ಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಾರಿಗೂ ನ್ಯಾಯ ಕೊಡಲಿಲ್ಲ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು.

For Latest News Updates, Join Our Whatsapp Community🚩
RELATED ARTICLES

Most Popular