HomeEntertainmentಮತ್ತೆ ಪತಿ ಜೊತೆ ಒಂದಾದ ರಾಖಿ ಸಾವಂತ್; ಗೊಳೋ ಎಂದು ಅತ್ತಿದ್ದು ಡ್ರಾಮಾನಾ ಎನ್ನುತ್ತಿದ್ದಾರೆ ನೆಟ್ಟಿಗರು...!

ಮತ್ತೆ ಪತಿ ಜೊತೆ ಒಂದಾದ ರಾಖಿ ಸಾವಂತ್; ಗೊಳೋ ಎಂದು ಅತ್ತಿದ್ದು ಡ್ರಾಮಾನಾ ಎನ್ನುತ್ತಿದ್ದಾರೆ ನೆಟ್ಟಿಗರು…!

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ತಮ್ಮ ಮದುವೆಯನ್ನು ಪತಿ ಆದಿಲ್ ದುರಾನಿ ಒಪ್ಪಿಕೊಳ್ಳುತ್ತಿಲ್ಲವೆಂದು ಗೋಳಾಡಿದ್ದರು. ಆತನಿಗಾಗಿ ತಾನು ಇಸ್ಲಾಂ ಗೆ ಮತಾಂತರವಾಗಿದ್ದರೂ ಸಹ ಮದುವೆಯೇ ಆಗಿಲ್ಲವೆಂದು ವಾದಿಸಿದ್ದ ಎಂದು ಆರೋಪಿಸಿದ್ದರು.

ಇದಾದ ಎರಡು ದಿನಗಳ ಬಳಿಕ ಈಗ ರಾಖಿ ಸಾವಂತ್ ಪತಿ ಜೊತೆ ಮತ್ತೆ ಒಂದಾಗಿದ್ದಾರೆ. ಅಲ್ಲದೆ ಆದಿಲ್ ದುರಾನಿ ಕೂಡಾ ತಮ್ಮಿಬ್ಬರ ಮದುವೆಯನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಆದಿಲ್, ‘ಕೆಲವೊಂದು ಸಂಗತಿಗಳನ್ನು ನಾನು ಸೂಕ್ತ ರೀತಿಯಲ್ಲಿ ಹ್ಯಾಂಡಲ್ ಮಾಡಬೇಕಿತ್ತು. ಹಾಗಾಗಿ ಸುಮ್ಮನಿದ್ದೆ. ಹ್ಯಾಪಿ ಮ್ಯಾರೀಡ್ ಲೈಫ್ ಪಪ್ಪುಡಿ’ ಎಂದು ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಕಿಸ್ ಮತ್ತು ಹಾರ್ಟ್ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿರುವ ರಾಖಿ ಸಾವಂತ್, ‘ಥ್ಯಾಂಕ್ಸ್ ಜಾನ್, ಲಾಟ್ಸ್ ಆಫ್ ಲವ್’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವಿಬ್ಬರು ಒಂದಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಕೆಲ ನೆಟ್ಟಿಗರು ಮತ್ತೆ ಗೊಳೋ ಎಂದು ಅತ್ತಿದ್ದು ಏನು ಡ್ರಾಮಾನಾ ಎಂದು ಕಿಚಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular