HomeEntertainmentಭಾರತದಲ್ಲಿ ಏನು ಟ್ರೆಂಡ್​ ಆಗಿದೆ ಎಂಬ ಪ್ರಶ್ನೆಗೆ ಹೀಗೆ ನರ್ತಿಸಿದ ಪುಟಾಣಿ

ಭಾರತದಲ್ಲಿ ಏನು ಟ್ರೆಂಡ್​ ಆಗಿದೆ ಎಂಬ ಪ್ರಶ್ನೆಗೆ ಹೀಗೆ ನರ್ತಿಸಿದ ಪುಟಾಣಿ

ಇನ್​ಸ್ಟಾಗ್ರಾಮ್​ ರೀಲ್ಸ್​ಗಳ ಹುಚ್ಚು ಚಿಕ್ಕಮಕ್ಕಳನ್ನೂ ಬಿಟ್ಟಿಲ್ಲ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಅಗಿದೆ.

ಬಾಲಕಿಯೊಬ್ಬಳು ಇನ್ನೊಬ್ಬಳನ್ನು ಕೇಳುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. “ಗೈಸ್, ತೇರೆ ಇಂಡಿಯಾ ಮೆ ಕ್ಯಾ ಚಲ್ ರಹಾ ಹೈ ( ನಿಮ್ಮ ಭಾರತದಲ್ಲಿ ಏನು ಟ್ರೆಂಡಿಂಗ್ ಆಗಿದೆ)?” ಎಂದು ಒಬ್ಬ ಬಾಲಕಿ ಇನ್ನೊಬ್ಬಳಿಗೆ ಕೇಳುತ್ತಾಳೆ.ಆದರೆ ಇನ್ನೊಬ್ಬ ಬಾಲಕಿ, “ಮೇರೆ ಇಂಡಿಯಾ ಮೆ…… (ನನ್ನ ಭಾರತದಲ್ಲಿ)” ಎಂದು ಡಾನ್ಸ್​ ಮಾಡಲು ಶುರು ಮಾಡುತ್ತಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಮೇರಾ ದಿಲ್ ಯೇ ಪುಕರೆ ಆಜಾ’ ಎಂಬ ವೈರಲ್ ಹಾಡಿಗೆ ಬಾಲಕಿ ಹಾಡುತ್ತಾ ನೃತ್ಯ ಮಾಡುತ್ತಾಳೆ. ಲತಾ ಮಂಗೇಶ್ಕರ್ ಅವರ ಈ ಹಾಡಿಗೆ ಪಾಕಿಸ್ತಾನಿ ಹುಡುಗಿ ಆಯೇಷಾ ಮಾಡಿದ ನೃತ್ಯ ಭಾರಿ ವೈರಲ್​ ಆದ ನಂತರ ಈ ಹಾಡಿಗೆ ಭಾರಿ ಡಿಮಾಂಡ್​ ಬಂದಿದೆ. ಈ ಹಾಡು ಮತ್ತು ನೃತ್ಯ ಜಾಲತಾಣದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು, ಈ ಬಾಲಕಿ ಕೂಡ ಅದರದ್ದೇ ನೃತ್ಯ ಮಾಡಿದ್ದಾಳೆ.

1954 ರ ಹಾಡಿನ ರೀಮಿಕ್ಸ್ ಆವೃತ್ತಿ ಹಾಡೀಗ ಟ್ರೆಂಡ್​ ಆಗಿದ್ದು, ನಮ್ಮ ಭಾರತದಲ್ಲಿಯಲ್ಲಿಯೂ ಇದೇ ಟ್ರೆಂಡ್​ ಆಗಿದೆ ಎನ್ನುವ ಮೂಲಕ ಬಾಲಕಿ ನೃತ್ಯ ಮಾಡಿರುವುದು ಜನರ ಮನಸ್ಸು ಗೆದ್ದಿದೆ. ಪುಟಾಣಿ ಮಕ್ಕಳ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular