HomeLifestyleಮನೆಯಲ್ಲಿಯೇ ಸುಲಭವಾಗಿ ಮಾಡಬಹುದು ಚೈನೀಸ್ ಚಿಕನ್ ಫ್ರೈಡ್ ರೈಸ್

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು ಚೈನೀಸ್ ಚಿಕನ್ ಫ್ರೈಡ್ ರೈಸ್

 

ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

½ ಕೆ.ಜಿ. ಕೋಳಿ ಮಾಂಸ, 50 ಗ್ರಾಂ ಎಣ್ಣೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಕ್ಯಾರೆಟ್, 1 ಸ್ಪೂನ್ ಕರಿಮೆಣಸಿನ ಪುಡಿ, 50 ಗ್ರಾಂ ದೊಣ್ಣೆ ಮೆಣಸಿನಕಾಯಿ, 50 ಗ್ರಾಂ ಬೀನ್ಸ್, ½ ಕೆ.ಜಿ. ಜೀರಾ ರೈಸ್, 2 ಮೊಟ್ಟೆ, ಚಿಟಿಕೆ ಅಜಿನೊಮೊಟೊ, ಸೋಯಾಸಾಸ್, ರುಚಿಗೆ ತಕ್ಕಷ್ಟು ಉಪ್ಪು.

 ತಯಾರಿಸುವ ವಿಧಾನ:

ಮೊದಲಿಗೆ ಕೋಳಿ ಮಾಂಸವನ್ನು ಬೇಯಿಸಿಕೊಂಡು ಮೂಳೆ ತೆಗೆದು ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ಅಕ್ಕಿಯನ್ನು ಮುಕ್ಕಾಲು ಭಾಗ ಬೇಯಿಸಿ ಇಡಿ.

ಕ್ಯಾರೆಟ್, ಬೀನ್ಸ್ ಸಣ್ಣಗೆ ಕತ್ತರಿಸಿ ಬೇಯಿಸಿಕೊಳ್ಳಿ. ಈರುಳ್ಳಿ ಮತ್ತು ದೊಣ್ಣೆ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ. 2 ನಿಮಿಷವಾದ ನಂತರ ಮೊಟ್ಟೆಯನ್ನು ಒಡೆದು ಹಾಕಿ, ತಿರುಗಿಸಿರಿ. ಅದಕ್ಕೆ ಬೇಯಿಸಿದ ಅನ್ನ, ತರಕಾರಿ, ಚಿಕನ್ ಹಾಕಿ ಕೆಲವು ನಿಮಿಷಗಳ ಕಾಲ ತಿರುಗಿಸಿ ಚೆನ್ನಾಗಿ ಮಿಕ್ಸ್ ಮಾಡಿರಿ. ಸ್ವಲ್ಪ ಸಮಯದ ನಂತರ ಬಿಸಿಬಿಸಿಯಾಗಿ ಸೋಯಾಸಾಸ್ ನೊಂದಿಗೆ ತಿನ್ನಲು ಕೊಡಿ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular