HomeLatest Newsಅಕ್ಟೋಬರ್ 11 ರಿಂದ ನವರಾತ್ರಿ ಸಂಭ್ರಮ: ವ್ರತದ ಸಮಯದಲ್ಲಿ ಸೇವಿಸಬಹುದಾದ 5 ಪೌಷ್ಟಿಕ ಆಹಾರಗಳಿವು

ಅಕ್ಟೋಬರ್ 11 ರಿಂದ ನವರಾತ್ರಿ ಸಂಭ್ರಮ: ವ್ರತದ ಸಮಯದಲ್ಲಿ ಸೇವಿಸಬಹುದಾದ 5 ಪೌಷ್ಟಿಕ ಆಹಾರಗಳಿವು

ಭಾರತದ ಪ್ರಮುಖ ಹಾಗೂ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುವ ಹಬ್ಬಗಳಲ್ಲಿ ಶಾರ್ದೀಯ ನವರಾತ್ರಿಗೆ ವಿಶೇಷ ಸ್ಥಾನವಿದೆ. ಒಂಬತ್ತು ದಿನಗಳ ಕಾಲ ನವದುರ್ಗೆಯರನ್ನು ಆರಾಧಿಸುವ ಈ ಪವಿತ್ರ ಪರ್ವಕಾಲವು ಈ ವರ್ಷ ಅಕ್ಟೋಬರ್ 11 ರಿಂದ ಪ್ರಾರಂಭವಾಗಲಿದೆ. ಘಟಸ್ಥಾಪನೆಯೊಂದಿಗೆ ಚಾಲನೆ ಸಿಗುವ ಈ ಆಚರಣೆಯಲ್ಲಿ ಭಕ್ತರು ಒಂಬತ್ತು ದಿನಗಳ ಕಾಲ ವ್ರತ ಕೈಗೊಂಡು ದುರ್ಗಾದೇವಿಯ ಪೂಜೆ ಸಲ್ಲಿಸುತ್ತಾರೆ.

ಅಷ್ಟಮಿ ಮತ್ತು ನವಮಿ ಯಾವಾಗ?

ಪ್ರತಿ ವರ್ಷ ಅಷ್ಟಮಿ ಹಾಗೂ ನವಮಿ ತಿಥಿಗಳ ದಿನಾಂಕದ ಬಗ್ಗೆ ಭಕ್ತರಲ್ಲಿ ಗೊಂದಲವಿರುತ್ತದೆ. ಪಂಚಾಂಗದ ಪ್ರಕಾರ ಅಷ್ಟಮಿ ತಿಥಿಯು ಅಕ್ಟೋಬರ್ 18 ರಂದು ಬೆಳಿಗ್ಗೆ 8:27 ಕ್ಕೆ ಆರಂಭವಾಗಿ ಅಕ್ಟೋಬರ್ 19 ರ ಬೆಳಿಗ್ಗೆ 10:51 ಕ್ಕೆ ಮುಕ್ತಾಯಗೊಳ್ಳುತ್ತದೆ. ತಕ್ಷಣವೇ ನವಮಿ ತಿಥಿ ಪ್ರಾರಂಭವಾಗುತ್ತದೆ. ಉದಯ ತಿಥಿ ನಿಯಮದ ಪ್ರಕಾರ ಈ ಬಾರಿ ಅಷ್ಟಮಿ ಮತ್ತು ನವಮಿ ಎರಡನ್ನೂ ಅಕ್ಟೋಬರ್ 19 ರಂದೇ ಆಚರಿಸಲಾಗುತ್ತದೆ. ಅಂದೇ ಕನ್ಯಾ ಪೂಜೆಯನ್ನು ಕೂಡ ನೆರವೇರಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪವಾಸದ ಸಮಯದಲ್ಲಿ ಸೇವಿಸಬಹುದಾದ 5 ಸಾತ್ವಿಕ ಖಾದ್ಯಗಳು

ನವರಾತ್ರಿ ವ್ರತದ ಸಮಯದಲ್ಲಿ ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮದ್ಯಪಾನವನ್ನು ಸಂಪೂರ್ಣವಾಗಿ ವರ್ಜಿಸಿ ಸಾತ್ವಿಕ ಆಹಾರವನ್ನು ಸೇವಿಸಲಾಗುತ್ತದೆ. ಸಿಂಗಾಡ ಹಿಟ್ಟು, ಕುಟ್ಟು ಹಿಟ್ಟು, ಕಲ್ಲುಪ್ಪು, ಸಾಬೂದಾನ, ಸುವರ್ಣ ಗೆಡ್ಡೆ, ಆಲೂಗಡ್ಡೆ, ಮೊಸರು ಹಾಗೂ ಒಣಹಣ್ಣುಗಳನ್ನು ಬಳಸಿ ತಯಾರಿಸಬಹುದಾದ ಕೆಲವು ರುಚಿಕರ ಖಾದ್ಯಗಳ ವಿವರ ಇಲ್ಲಿದೆ.

1. ಸಿಹಿ-ಖಾರದ ಕುಂಬಳಕಾಯಿ ಪಲ್ಯ ಸಿಹಿ, ಹುಳಿ ಮತ್ತು ಸ್ವಲ್ಪ ಖಾರದ ಮಿಶ್ರಣವಾಗಿರುವ ಈ ಕುಂಬಳಕಾಯಿ ಸಾಗು ನವರಾತ್ರಿಯ ಜನಪ್ರಿಯ ಖಾದ್ಯ. ಇದು ಮಾಡಲು ಅತ್ಯಂತ ಸುಲಭವಾಗಿದ್ದು, ಕುಟ್ಟು ಪೂರಿ ಅಥವಾ ಸಾಮಕ್ಕಿ ಅನ್ನದೊಂದಿಗೆ ಸೇವಿಸಲು ಉತ್ತಮವಾಗಿದೆ.

2. ಸಾಬೂದಾನ ಟಿಕ್ಕಿ ಚಾಟ್ ಸಾಬೂದಾನದಿಂದ ತಯಾರಿಸಿದ ಗರಿಗರಿಯಾದ ಟಿಕ್ಕಿಗೆ ಸಿಹಿ ಮೊಸರು, ಕಲ್ಲುಪ್ಪು ಮತ್ತು ಹಸಿರು ಚಟ್ನಿ ಸೇರಿಸಿ ಚಾಟ್ ರೂಪದಲ್ಲಿ ಸೇವಿಸಬಹುದು. ಇದು ಉಪವಾಸದ ಸಮಯದಲ್ಲಿ ತಿನ್ನಲು ರುಚಿಕರವಾದ ತಿಂಡಿಯಾಗಿದೆ.

3. ಸಾಮಕ್ಕಿ ಪುಲಾವ್ ಹಗುರವಾದ ಹಾಗೂ ಹೊಟ್ಟೆ ತುಂಬಿಸುವ ಸಾಮಕ್ಕಿ ಅಕ್ಕಿ ಪುಲಾವ್ ಅನ್ನು ಬೆವಿಸಿದ ಆಲೂಗಡ್ಡೆ, ಕಡಲೇಕಾಯಿ ಮತ್ತು ಹಸಿಮೆಣಸಿನಕಾಯಿ ಬಳಸಿ ತಯಾರಿಸಲಾಗುತ್ತದೆ. ಇದನ್ನು ತಿಳಿ ಆಲೂಗಡ್ಡೆ ಪಲ್ಯದೊಂದಿಗೆ ಸೇವಿಸಬಹುದು.

4. ಮಖಾನಾ ಖೀರ್ ತಾಮರೆ ಬೀಜ, ಹಾಲು, ಏಲಕ್ಕಿ ಹಾಗೂ ಒಣಹಣ್ಣುಗಳನ್ನು ಬಳಸಿ ಮಾಡುವ ಈ ಖೀರ್ ಅತ್ಯಂತ ಪೌಷ್ಟಿಕವಾಗಿದೆ. ಉಪವಾಸದ ಸಮಯದಲ್ಲಿ ಸಿಹಿ ತಿನ್ನಬೇಕೆನಿಸಿದರೆ ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದು.

5. ಆಲೂ ರಸೇದಾರ್ ಬೇಯಿಸಿದ ಆಲೂಗಡ್ಡೆ, ಜೀರಿಗೆ, ಕಪ್ಪು ಮೆಣಸು, ಟೊಮೆಟೊ ಮತ್ತು ಕಲ್ಲುಪ್ಪು ಬಳಸಿ ಮಾಡುವ ಗ್ರೇವಿ ಮಾದರಿಯ ಈ ಖಾದ್ಯವು ಬಿಸಿಬಿಸಿ ಕುಟ್ಟು ಪೂರಿಯೊಂದಿಗೆ ಸವಿಯಲು ಅತ್ಯುತ್ತಮ ಕಾಂಬಿನೇಷನ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular