HomeBusiness25 ಸಾವಿರ ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಗಳಿಸಿ 50 ಸಾವಿರ ರೂಪಾಯಿ

25 ಸಾವಿರ ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಗಳಿಸಿ 50 ಸಾವಿರ ರೂಪಾಯಿ

ಹೊಸ ಬ್ಯುಸಿನೆಸ್ ಶುರು ಮಾಡಲು ಬಯಸಿದವರಿಗೆ ಈಗ ನಾವು ಹೇಳ್ತಿರುವ ಬ್ಯುಸಿನೆಸ್ ಬೆಸ್ಟ್. ಕೇವಲ 25 ಸಾವಿರ ರೂಪಾಯಿ ಹೂಡಿಕೆ ಮಾಡಿ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ 50 ಸಾವಿರ ರೂಪಾಯಿ ಗಳಿಕೆ ಮಾಡಬಹುದು.

ಕಡಿಮೆ ಬೆಲೆಗೆ ಶುರು ಮಾಡುವ ಬ್ಯುಸಿನೆಸ್ ಗಳಲ್ಲಿ ಕಾರ್ ವಾಷಿಂಗ್ ಬ್ಯುಸಿನೆಸ್ ಕೂಡ ಒಂದು. ಸಣ್ಣ ಯಂತ್ರದ ಮೂಲಕ ಈ ಬ್ಯುಸಿನೆಸ್ ಶುರು ಮಾಡಬಹುದು. ಒಂದು ಲಕ್ಷ ರೂಪಾಯಿಗೆ ನೀವು ವಾಷಿಂಗ್ ಯಂತ್ರವನ್ನು ಖರೀದಿ ಮಾಡಬಹುದು. ಮಾರುಕಟ್ಟೆಯಲ್ಲಿ 1200 ರೂಪಾಯಿ ಯಂತ್ರವೂ ಸಿಗುತ್ತದೆ. ಪೈಪ್, ವ್ಯಾಕ್ಲೂಮ್ ಕ್ಲೀನರ್, ಶಾಂಪೂ, ಕ್ಲೀನಿಂಗ್ ಬಟ್ಟೆ, ಟೈರ್ ಪಾಲಿಶ್, ಡ್ಯಾಶ್ ಬೋರ್ಡ್ ಪಾಲಿಶ್ ಸೇರಿದಂತೆ ಎಲ್ಲ ವಸ್ತುಗಳನ್ನು ಖರೀದಿಸಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಗಡಿ ತೆರೆಯುವ ಮೊದಲು ಸ್ಥಳ ಪರಿಶೀಲನೆ ಮಾಡಬೇಕು. ಪಾರ್ಕಿಂಗ್ ಬಗ್ಗೆಯೂ ಗಮನ ನೀಡಬೇಕು. ನೀವು ಮೆಕ್ಯಾನಿಕ್ ಅಂಗಡಿ ಜೊತೆ ಟೈ ಅಪ್ ಮಾಡಿಕೊಂಡು ಅರ್ಧ ಜಾಗದಲ್ಲಿ ನಿಮ್ಮ ಅಂಗಡಿ ತೆರೆಯಬಹುದು. ಆಗ ಖರ್ಚು ಕಡಿಮೆಯಾಗುತ್ತದೆ. ಬೇರೆ ಬೇರೆ ನಗರಗಳಲ್ಲಿ ಕಾರ್ ಕ್ಲಿನಿಂಗ್ ಶುಲ್ಕ ಬೇರೆ ಬೇರೆಯಿದೆ. ಕಾರುಗಳ ಮೇಲೂ ಬೆಲೆ ನಿರ್ಧಾರವಾಗುತ್ತೆ. ಒಳ್ಳೆಯ ಜಾಗದಲ್ಲಿ ನೀವು ತಿಂಗಳಿಗೆ 50 ಸಾವಿರ ರೂಪಾಯಿವರೆಗೆ ಗಳಿಕೆ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular