HomeLatest News'ಹಾಲಿನ ಪುಡಿಯಿಂದ ಮಾಡಿ ಸಿಹಿ ಪೇಡʼ

‘ಹಾಲಿನ ಪುಡಿಯಿಂದ ಮಾಡಿ ಸಿಹಿ ಪೇಡʼ

ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿ ನೋಡಿ ಹಾಲಿನಪುಡಿಯಿಂದ ಸಿಹಿಪೇಡಾ. ಇದು ತಿನ್ನಲು ರುಚಿಕರವಾಗಿರುತ್ತದೆ ಹಾಗೇ ಬೇಗನೆ ಆಗಿಬಿಡುತ್ತದೆ.

ಬೇಕಾಗುವ ಸಾಮಗ್ರಿಗಳು: 1 -ಕಪ್ ಹಾಲಿನ ಪುಡಿ, 3/4- ಕಪ್ ಸಕ್ಕರೆ ಪುಡಿ, 2 – ಚಮಚ ತುಪ್ಪ,1/2 – ಕಪ್ ಹಾಲು, ಏಲಕ್ಕಿ ಪುಡಿ ಸ್ವಲ್ಪ.

 ಮಾಡುವ ವಿಧಾನ : ಮೊದಲು ಒಂದು ಪ್ಯಾನ್ ನಲ್ಲಿ 1 ಚಮಚ ತುಪ್ಪ ಹಾಕಿ ಕರಗಿಸಿ ನಂತರ ಹಾಲು ಸಕ್ಕರೆ ಪುಡಿ ಹಾಕಿ. ಸಕ್ಕರೆ ಕರಗಿದ ಮೇಲೆ ಹಾಲಿನ ಪುಡಿ, ಏಲಕ್ಕಿ ಪುಡಿ ಉದುರಿಸಿ ಚೆನ್ನಾಗಿ ಗಂಟಾಗದ ಹಾಗೆ ಕೈಯಾಡಿಸಿ. ಮತ್ತೊಂದು ಚಮಚ ತುಪ್ಪ ಹಾಕಿ ತಳ ಬಿಡುವವರೆಗೂ ಮಿಕ್ಸ್ ಮಾಡುತ್ತಲೇ ಇರಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿ ಪೇಡ ಆಕಾರದ ರೀತಿ ಚಪ್ಪಟೆ ಮಾಡಿದರೆ ರುಚಿಯಾದ ಪೇಡ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular