HomeBeautyಕೂದಲು ಸೊಂಪಾಗಿ ಬೆಳೆಯಲು ಬೆಸ್ಟ್ ನೆಲ್ಲಿಕಾಯಿ

ಕೂದಲು ಸೊಂಪಾಗಿ ಬೆಳೆಯಲು ಬೆಸ್ಟ್ ನೆಲ್ಲಿಕಾಯಿ

ಟಿವಿಯಲ್ಲಿ ಬರುವ ಜಾಹೀರಾತುಗಳನ್ನು ನೀವು ಗಮನಿಸಿರಬಹುದು. ಅವುಗಳಲ್ಲಿ ಎಲ್ಲಾ ಶ್ಯಾಂಪೂಗಳೂ ನೆಲ್ಲಿಕಾಯಿ ಬಳಸಿರುವುದಾಗಿ ಹೇಳಿಕೊಳ್ಳುತ್ತವೆ. ರಾಸಾಯನಿಕ ಭರಿತ ಆ ಶ್ಯಾಂಪೂಗಳನ್ನು ಬಳಸುವುದರ ಬದಲು ನೈಸರ್ಗಿಕವಾಗಿ ಸಿಗುವ ನೆಲ್ಲಿಕಾಯಿ ಬಳಸಿ ಯಾವುದೆಲ್ಲಾ ಲಾಭ ಪಡೆದುಕೊಳ್ಳಬಹುದು ನೋಡೋಣ.

ನೆಲ್ಲಿಕಾಯಿ ರಸಕ್ಕೆ ಆಯುರ್ವೇದದಲ್ಲೂ ಮಾನ್ಯತೆ ಇದೆ. ಕೂದಲಿನ ಬೆಳವಣಿಗೆಗೆ ಇದನ್ನು ಹೀಗೆ ಬಳಸಬಹುದು. ಬೆಟ್ಟದ ನೆಲ್ಲಿಕಾಯಿ ಸಿಗುವ ಅವಧಿಯಲ್ಲಿ ಅದನ್ನು ಸಂಗ್ರಹಿಸಿ ತಂದು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದರ ಹೊರತಾಗಿ ನೆಲ್ಲಿಕಾಯಿ ಪುಡಿಯೂ ಮಾರುಕಟ್ಟೆಯಲ್ಲಿ ಸಿಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಕೆ ಮಾಡುವಾಗ ಈ ಪುಡಿಗೆ ಶೀಗೆಕಾಯಿ ಪುಡಿ ಸೇರಿಸಿ ತುಸು ನೀರು ಸೇರಿಸಿ ಪೇಸ್ಟ್ ರೂಪಕ್ಕೆ ಬರಿಸಿ. ಇದಕ್ಕೆ ನಿಂಬೆರಸ, ಕೊಬ್ಬರಿ ಎಣ್ಣೆ ಹಾಕಿ ತಲೆಗೆ ಚೆನ್ನಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಳಿಕ ಸ್ನಾನ ಮಾಡಿದರೆ ನಿಮ್ಮ ತಲೆಕೂದಲು ಉದುರುವ ಸಮಸ್ಯೆ ದೂರವಾಗುವುದು ಮಾತ್ರವಲ್ಲ, ಕೂದಲು ಸೊಂಪಾಗಿಯೂ ಬೆಳೆಯುತ್ತದೆ.

ಇದನ್ನು ಹಾಕಿದ ಬಳಿಕ ಸ್ನಾನ ಮಾಡುವಾಗ ಯಾವುದೇ ಶ್ಯಾಂಪೂವನ್ನು ಬಳಸದಿರಿ. ಏಕೆಂದರೆ ಶೀಗೆಕಾಯಿ ಪುಡಿಯೇ ಶ್ಯಾಂಪೂವಿನ ಪರಿಣಾಮವನ್ನು ನೀಡುತ್ತದೆ. ನೆಲ್ಲಿಕಾಯಿಯನ್ನು ಒಣಗಿಸಿ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿಕೊಳ್ಳುವುದರಿಂದಲೂ ಕೂದಲು ಕಪ್ಪಾಗಿ, ಉದ್ದಕ್ಕೆ ಬೆಳೆಯುತ್ತದೆ. ತಲೆಹೊಟ್ಟಿನ ಸಮಸ್ಯೆಯೂ ದೂರವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular