HomeLatest Newsಆಲೀವ್ ಆಯಿಲ್‌ ಶುದ್ಧವಾಗಿದೆಯಾ ಅಂತ ಕಂಡುಹಿಡಿಯುವುದು ಹೇಗೆ ಗೊತ್ತಾ....?

ಆಲೀವ್ ಆಯಿಲ್‌ ಶುದ್ಧವಾಗಿದೆಯಾ ಅಂತ ಕಂಡುಹಿಡಿಯುವುದು ಹೇಗೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಶುದ್ಧವಾದ ವಸ್ತುಗಳಿಗಿಂತ ಕಲಬೆರಕೆ ವಸ್ತುಗಳೇ ಹೆಚ್ಚಾಗಿ ಕಂಡುಬರುತ್ತದೆ.

ಅದೇರೀತಿ ಎಣ್ಣೆಗಳಲ್ಲಿಯೂ ಕೂಡ ನಕಲಿ, ಕಲಬೆರೆಕೆ ಎಣ್ಣೆಗಳು ಹೆಚ್ಚು ಕಂಡುಬರುತ್ತದೆ. ಆಲೀವ್ ಎಣ್ಣೆ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ನಕಲಿ ಆಲೀವ್ ಎಣ್ಣೆಯನ್ನು ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಈ ಆಲೀವ್ ಎಣ್ಣೆ, ಶುದ್ಧವೇ? ಅಶುದ್ಧವೇ ಕಂಡು ಹಿಡಿಯುವುದು ಹೇಗೆ ಗೊತ್ತಾ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಲ್ಪ ಆಲೀವ್ ಎಣ್ಣೆಯನ್ನು ನಿಮ್ಮ ನಾಲಿಗೆ ಮೇಲೆ ಹಾಕಿಕೊಳ್ಳಿ, ಅದು ಕಹಿಯಾಗಿದ್ದರೆ ಶುದ್ಧ ಎಂದರ್ಥ.
ಹಾಗೇ ಗಾಜಿನ ಮೇಲೆ ಸ್ವಲ್ಪ ಆಲೀವ್ ಎಣ್ಣೆ ಹಾಕಿ ಕೈಯಿಂದ ಸ್ವಲ್ಪ ಸಮಯದವರೆಗೆ ಚೆನ್ನಾಗಿ ಉಜ್ಜಿ. ಗಾಜು ಬಿಸಿಯಾದಾಗ ಆ ಎಣ್ಣೆಯ ವಾಸನೆ ನೋಡಿ ಅದು ಹುಳಿಯಾದ ವಾಸನೆ ಇದ್ದರೆ ಅದು ಶುದ್ಧ ಎಂದರ್ಥ. ಯಾಕೆಂದರೆ ನಕಲಿ ಎಣ್ಣೆ ವಾಸನೆಯಿಂದ ಕೂಡಿರುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular