ಹಳೆ ಸಾಕ್ಸ್ ಬಿಸಾಡುವ ಮುನ್ನ ಇದನ್ನೊಮ್ಮೆ ಓದಿ

ಯಾವುದಕ್ಕೂ ಬೇಡ ಎಂದು ಎಸೆಯುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ಪ್ರಯೋಜನ ಪಡೆಯಬಹುದು. ಅದರಲ್ಲಿ ಒಂದು ಈ ಸಾಕ್ಸ್. ಬಳಸಿ ಕೊನೆಗೆ ಹಳೆತು ಆಯಿತೆಂದು ಕಸದ ಬುಟ್ಟಿಗೆ ಎಸೆದು ಬಿಡುತ್ತಿವಿ. ಅದರ ಬದಲು ಅದನ್ನು ಈ ರೀತಿಯಾಗಿ ಬಳಸಿ ನೋಡಿ.

ವಿಂಡೋ ಶಟ್ಟರ್, ಕೆಲವೊಂದು ಗ್ಲಾಸ್ ಗಳನ್ನು ಕೈಯಿಂದಲೇ ಕ್ಲೀನ್ ಮಾಡಬೇಕಾಗುತ್ತದೆ. ಆಗ ಕೈಗೆ ಈ ಸಾಕ್ಸ್ ಹಾಕಿಕೊಂಡು ಸುಲಭವಾಗಿ ಇದನ್ನೆಲ್ಲಾ ಕ್ಲೀನ್ ಮಾಡಬಹುದು.

ಇನ್ನು ದಿನ ಬಳಸುವ ಸುಗಂಧದ್ರವ್ಯದ ಬಾಟಲ್ ಗಳು, ಕೆಲವೊಂದು ಕ್ರೀಂ ಇವುಗಳನ್ನು ಪ್ರತಿದಿನ ಉಪಯೋಗಿಸುತ್ತೇವೆ. ಇವುಗಳನ್ನು ಬಳಸುವಾಗ ಕೆಲವೊಮ್ಮೆ ಕೈ ಜಾರಿ ಹೋಗುತ್ತದೆ. ಇದನ್ನು ತಪ್ಪಿಸಲು. ಈ ಬಾಟಲ್ ಗಳನ್ನು ಈ ಸಾಕ್ಸ್ ನಿಂದ ಕವರ್ ಮಾಡಿದರೆ ಒಡೆದು ಹೋಗುವುದು ತಪ್ಪುತ್ತದೆ.

ಮಕ್ಕಳಿಗೆ ಬರೆಯುವುದಕ್ಕೆ ವೈಟ್ ಬೋರ್ಡ್ ತಂದಿಟ್ಟುಕೊಂಡಿದ್ದರೆ ಈ ಹಳೆ ಸಾಕ್ಸ್ ಅಲ್ಲೂ ಕೂಡ ಸಹಾಕವಾಗಲಿದೆ. ಇದನ್ನು ಬಳಸಿ ಅವರು ಬರೆದದ್ದನ್ನು ಸುಲಭವಾಗಿ ಕ್ಲೀನ್ ಮಾಡಬಹುದು.

ಇನ್ನು ಮನೆಯಲ್ಲಿರುವ ಫರ್ನಿಚರ್ ಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಾಗಿಸುವಾಗ ನೆಲದಲ್ಲಿ ಗೀರುಕಲೆಗಳು ಉಂಟಾಗತ್ತದೆ. ಆಗ ಆ ಫರ್ನೀಚರ್ ಕಾಲುಗಳಿಗೆ ಈ ಸಾಕ್ಸ್ ನ್ನು ಹಾಕಿ ನಂತರ ದೂಡಿದರೆ ಕಲೆಗಳು ಆಗುವುದಿಲ್ಲ.

ಇನ್ನು ಮಕ್ಕಳು ಆಡುವ ಚಿಕ್ಕ ಚಿಕ್ಕ ಬಾಲ್ ಗಳು ಮನೆ ತುಂಬಾ ಹರವಿ ಕೊಂಡಿರುತ್ತದೆ. ಇದನ್ನು ಕೂಡ ಈ ಸಾಕ್ಸ್ ನೊಳಗೆ ತುಂಬಿ ಇಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read