alex Certify ಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ…..?

ಜಾಮೂನು ಎಂದರೆ ಎಲ್ಲರೂ ಇಷ್ಟ ಪಟ್ಟು ಸವಿಯುವ ಸಿಹಿ. ಪುಟ್ಟ ಮಕ್ಕಳಿಗೂ ಜಾಮೂನ್ ತಿನ್ನುವುದು ಎಂದರೆ ಬಲು ಪ್ರೀತಿ. ಇಂತಹ ಜಾಮೂನ್ ಬಾಳೆಹಣ್ಣಿನಿಂದಲೂ ತಯಾರಾಗುತ್ತದೆ ಅಂದ್ರೆ ಒಮ್ಮೆ ಯಾಕೆ ರುಚಿ ನೋಡಬಾರದು. ಇಲ್ಲಿದೆ ನೋಡಿ ಬಾಳೆಹಣ್ಣಿನ ಜಾಮೂನು ರೆಸಿಪಿ.

ಬೇಕಾಗುವ ಸಾಮಾಗ್ರಿಗಳು

ನೇಂದ್ರ ಬಾಳೆ ಹಣ್ಣು – 4
ಸಕ್ಕರೆ -1 ಲೋಟ
ಏಲಕ್ಕಿಪುಡಿ ಸ್ವಲ್ಪ
ತುಪ್ಪ ಕರಿಯಲು

ಮಾಡುವ ವಿಧಾನ

ಮೊದಲಿಗೆ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಸಕ್ಕರೆ ಮುಳುಗುವಷ್ಟು ನೀರನ್ನು ಬಾಣಲಿಗೆ ಹಾಕಿ ಐದು ನಿಮಿಷಗಳ ಕಾಲ ಕುದಿಸಬೇಕು. ಸಕ್ಕರೆ ಪಾಕವನ್ನು ಒಂದೆಡೆ ತೆಗೆದು ಇಟ್ಟುಕೊಳ್ಳಬೇಕು.

ಬಾಳೆಹಣ್ಣನ್ನು ಬಿಲ್ಲೆಗಳಂತೆ ಕತ್ತರಿಸಿ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಬಾಳೆಹಣ್ಣಿನ ಬಿಲ್ಲೆಗಳನ್ನು ಜಾಮೂನಿನಂತೆ ಕರೆಯಬೇಕು. ಕರಿದ ನಂತರ ಬಿಸಿಯಾದ ಸಕ್ಕರೆ ಪಾಕಕ್ಕೆ ಹಾಕಿ ಬಾಳೆಹಣ್ಣಿನ ಜಾಮೂನನ್ನು ನಂತರ ಸವಿಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...