HomeLatest Newsಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ.....?

ಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ…..?

ಜಾಮೂನು ಎಂದರೆ ಎಲ್ಲರೂ ಇಷ್ಟ ಪಟ್ಟು ಸವಿಯುವ ಸಿಹಿ. ಪುಟ್ಟ ಮಕ್ಕಳಿಗೂ ಜಾಮೂನ್ ತಿನ್ನುವುದು ಎಂದರೆ ಬಲು ಪ್ರೀತಿ. ಇಂತಹ ಜಾಮೂನ್ ಬಾಳೆಹಣ್ಣಿನಿಂದಲೂ ತಯಾರಾಗುತ್ತದೆ ಅಂದ್ರೆ ಒಮ್ಮೆ ಯಾಕೆ ರುಚಿ ನೋಡಬಾರದು. ಇಲ್ಲಿದೆ ನೋಡಿ ಬಾಳೆಹಣ್ಣಿನ ಜಾಮೂನು ರೆಸಿಪಿ.

ಬೇಕಾಗುವ ಸಾಮಾಗ್ರಿಗಳು

ನೇಂದ್ರ ಬಾಳೆ ಹಣ್ಣು – 4
ಸಕ್ಕರೆ -1 ಲೋಟ
ಏಲಕ್ಕಿಪುಡಿ ಸ್ವಲ್ಪ
ತುಪ್ಪ ಕರಿಯಲು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ

ಮೊದಲಿಗೆ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಸಕ್ಕರೆ ಮುಳುಗುವಷ್ಟು ನೀರನ್ನು ಬಾಣಲಿಗೆ ಹಾಕಿ ಐದು ನಿಮಿಷಗಳ ಕಾಲ ಕುದಿಸಬೇಕು. ಸಕ್ಕರೆ ಪಾಕವನ್ನು ಒಂದೆಡೆ ತೆಗೆದು ಇಟ್ಟುಕೊಳ್ಳಬೇಕು.

ಬಾಳೆಹಣ್ಣನ್ನು ಬಿಲ್ಲೆಗಳಂತೆ ಕತ್ತರಿಸಿ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಬಾಳೆಹಣ್ಣಿನ ಬಿಲ್ಲೆಗಳನ್ನು ಜಾಮೂನಿನಂತೆ ಕರೆಯಬೇಕು. ಕರಿದ ನಂತರ ಬಿಸಿಯಾದ ಸಕ್ಕರೆ ಪಾಕಕ್ಕೆ ಹಾಕಿ ಬಾಳೆಹಣ್ಣಿನ ಜಾಮೂನನ್ನು ನಂತರ ಸವಿಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular