HomeHealthನೀವೂ ಊಟ ಮಾಡುವಾಗ ಸಿಗುವ ʼಕರಿಬೇವಿನ ಎಲೆʼ ತಿನ್ನದೆ ಪಕ್ಕಕ್ಕಿಡುತ್ತೀರಾ....?

ನೀವೂ ಊಟ ಮಾಡುವಾಗ ಸಿಗುವ ʼಕರಿಬೇವಿನ ಎಲೆʼ ತಿನ್ನದೆ ಪಕ್ಕಕ್ಕಿಡುತ್ತೀರಾ….?

ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ.

* ಮುಖ್ಯವಾಗಿ ಇದರಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಅಂಶಗಳಿವೆ. ಇದು ಗರ್ಭಿಣಿಯರಿಗೆ, ಹೆಣ್ಣುಮಕ್ಕಳಿಗೆ ಒಳ್ಳೆಯದು. ಸಾಮಾನ್ಯವಾಗಿ ರಕ್ತದ ಕೊರತೆ ಅನಿಮೀಯಾದಿಂದ ಬಳಲುತ್ತಿರುವವರು, ಕರಿಬೇವಿನ ಎಲೆಯನ್ನು ತಿಂದಷ್ಟೂ ಒಳ್ಳೆಯದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಮದ್ಯ ಸೇವಿಸುವವರು ಲಿವರ್, ಕಿಡ್ನಿ ಸಮಸ್ಯೆಗೆ ತುತ್ತಾಗುವುದು ಸಹಜ. ಹೀಗಾಗಿ ಮದ್ಯಪಾನಿಗಳು ಕರಿಬೇವಿನ ಎಲೆಯನ್ನು ಸೇವಿಸುವುದರಿಂದ ಈ ತೊಂದರೆ ನಿವಾರಿಸಿಕೊಳ್ಳಬಹುದು ಎಂದು ಕೆಲವು ಸಂಶೋಧನೆಗಳು ಹೇಳಿವೆ.

* ಮಧುಮೇಹಿಗಳಿಗಂತೂ ಇದು ರಾಮಬಾಣ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯಲು ಕರಿಬೇವಿನ ಎಲೆಗಳು ಸಹಕಾರಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

* ಮೂಗು ಕಟ್ಟುವುದು, ಶ್ವಾಸಕೋಶ ಸಮಸ್ಯೆಗಳಿಗೂ ಕರಿಬೇವಿನ ಎಲೆಗಳ ಉಪಯೋಗ ಉತ್ತಮ. ಅಲ್ಲದೆ ಚರ್ಮದ ಸಂರಕ್ಷಣೆ, ಕೂದಲು ಸೊಂಪಾಗಿ ಬೆಳೆಯಲೂ ಕರಿಬೇವಿನ ಎಲೆ ಸೇವಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular