alex Certify ‘ಆರೋಗ್ಯ’ಕರ ಜೀರ್ಣಕ್ರಿಯೆಗೆ ಸಹಕಾರಿ ಸಿಹಿ ಗೆಣಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆರೋಗ್ಯ’ಕರ ಜೀರ್ಣಕ್ರಿಯೆಗೆ ಸಹಕಾರಿ ಸಿಹಿ ಗೆಣಸು

ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ಕ್ಯಾರೋಟಿನ್‌, ಕಬ್ಬಿಣದಂಶ, ಫಾಲಟ್‌ ಮತ್ತು ಮೆಗ್ನೀಷಿಯಂ ಇದೆ. ಬೇರೆ ಯಾವುದೇ ಗೆಡ್ಡೆಗಳಲ್ಲಿ ಇರದಂತಹ ನಾರಿನಂಶವು ಅಧಿಕವಾಗಿದೆ. ಅಷ್ಟೇ ಅಲ್ಲದೇ…

* ಗೆಣಸಿನಲ್ಲಿ ವಿಟಮಿನ್‌ ಸಿ, ಬಿ2, ಬಿ6, ಇ ಮತ್ತು ಬಯೋಟಿನ್‌ ಸಮೃದ್ಧವಾಗಿದೆ. ಇದರಲ್ಲಿ ಪಾಂಟೊಥೆನಿಕ್‌ ಆಮ್ಲ ಇದೆ. ಕಡಿಮೆ ಕ್ಯಾಲೊರಿ ಮತ್ತು ಅಧಿಕ ಪ್ರೋಟೀನ್‌ ಇದೆ.

* ಇನ್ಸುಲಿನ್‌ ಗೆ ಪ್ರತಿಕ್ರಿಯೆ ನೀಡುವ ಕ್ಯಾರೋಟಿನ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ.

* ಹಲ್ಲುಗಳು, ಮೂಳೆ, ಚರ್ಮ, ನರಗಳು ಮತ್ತು ಥೈರಾಯ್ಡ್‌ ಗ್ರಂಥಿಗಳ ಆರೋಗ್ಯಕ್ಕೆ ವಿಟಮಿನ್‌ ಡಿ ಪ್ರಾಮುಖ್ಯವಾಗಿದೆ. ಇದರಲ್ಲಿರುವ ವಿಟಮಿನ್‌ ಡಿ ಮೂಳೆಗಳನ್ನು ಆರೋಗ್ಯವಾಗಿಡುತ್ತದೆ.

* ಗೆಣಸಿನಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಕರುಳನ್ನು ಸ್ವಚ್ಛ ಮಾಡುವುದು ಮತ್ತು ನಾರಿನಂಶವು ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದು ಮಲಬದ್ಧತೆಗೂ ಸಹಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...