alex Certify ಸುಲಭವಾಗಿ ತಯಾರಿಸಿ ‘ಟೊಮೆಟೊ ಸೂಪ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ತಯಾರಿಸಿ ‘ಟೊಮೆಟೊ ಸೂಪ್’

ಇಂದು ಅಡುಗೆ ಮನೆಯಲ್ಲಿ ಸೂಪ್ ಗಳದ್ದೇ ದರ್ಬಾರು. ಅದರಲ್ಲಿಯೂ ಟೊಮೆಟೊ ಸೂಪ್ ಅನ್ನು ಉಪಯೋಗಿಸದ ಮಂದಿಯೇ ಇಲ್ಲ. ಆದರೆ ಟೊಮೆಟೊ ಸೂಪ್ ತಯಾರಿಸುವ ಪರಿ ಹಲವರಿಗೆ ತಿಳಿದಿರಲಿಕ್ಕಿಲ್ಲ. ರುಚಿಯೊಂದಿಗೆ ಆರೋಗ್ಯಕ್ಕೂ ಹಿತಕರವಾದ ಈ ಸೂಪ್ ಅನ್ನು ತಯಾರಿಸುವ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು :

10 ಟೊಮೆಟೊ, 2 ಚಮಚ ಜೀರಿಗೆ, 5 ಚಮಚ ಸಕ್ಕರೆ, 2 ಚಮಚ ಉಪ್ಪು, 10 ಕಾಳು ಮೆಣಸಿನ ಪುಡಿ, 2 ಚಮಚ ಮುಸುಕಿನ ಜೋಳದ ಪುಡಿ, 1 ಚಮಚ ತುಪ್ಪ.

ಮಾಡುವುದು ಹೇಗೆ…?

ಮೊದಲು ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ ಜರಡಿಗೆ ಹಾಕಿ ಸೋಸಿಕೊಳ್ಳಬೇಕು. ಈ ಸೋಸಿದ ರಸಕ್ಕೆ ಸಕ್ಕರೆ, ಉಪ್ಪು, ಕಾಳು ಮೆಣಸಿನ ಪುಡಿ, ಮುಸುಕಿನ ಜೋಳದ ಪುಡಿ, ತುಪ್ಪ ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ ಕೆಳಗಿಳಿಸಬೇಕು. ನಿಮ್ಮ ಮನದಾಸೆಯ ಸೂಪ್ ರೆಡಿ. ಬ್ರೆಡ್, ಬನ್ ನೊಂದಿಗೆ ಸವಿಯಲು ಇದು ಅತ್ಯಂತ ಹಿತವಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...