ಬೆಳಗಾವಿ: ಎಸ್ ಎಸ್ ಬಿ ಕಾನ್ಸ್ ಟೇಬಲ್ ಓರ್ವ ಯುವತಿಯೊಂದಿಗೆ ಪ್ರೀತಿ, ಪ್ರೇಮ ಎಂದು ನಾಟಕವಾಡಿ ನಾಲ್ಕು ವರ್ಷಗಳ ಕಾಲ ಸುತ್ತಾಡು ಬಳಿಕ ಯುವತಿ ಮದುವೆಯಾಗು ರೆಂದಿದ್ದಕ್ಕೆ ಆಕೆಯನ್ನು ಮೋಸದಿಂದ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್‌ನಲ್ಲಿ ಕಾನ್ಸ್ಟೇಬಲ್ ಓರ್ವ ತನ್ನ ಪ್ರಿಯತಮೆಯನ್ನು ಕೊಲೆಗೈದು ಮೃತದೇಹವನ್ನು ಅಲ್ಲಿಕೇ ಬಿಸಾಕಿ ಎಸ್ಕೇಪ್ ಆಗಿದ್ದಾನೆ.
ಮದುವೆಯಾಗುವಂತೆ ಯುವತಿ ಒತ್ತಾಯಿಸಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಇದೇ ವಿಚಾರಕ್ಕೆ ಕೋಪಗೊಂಡ ಪ್ರಿಯಕರ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಫಾಲ್ಸ್‌ನ ಗುಡ್ಡದಲ್ಲಿ ಎಸೆದು ಪರಾರಿಯಾಗಿದ್ದಾನೆ.
ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕಾಲ್ ಹಿಸ್ಟರಿ ಮೂಲಕ ಕೊಲೆಯ ರಹಸ್ಯ ಬಯಲಾಗಿದೆ. ಪ್ರೇಯಸಿಯನ್ನೇ ಕೊಂದ ಆರೋಪದ ಮೇಲೆ ಸಶಸ್ತ್ರ ಪಡೆ ಪೇದೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕೊಲೆಯಾದ ಯುವತಿಯನ್ನು ಬೆಳಗಾವಿಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ರಕ್ಷಿತಾ ಸರಿಕರ್ (23) ಎಂದು ಗುರುತಿಸಲಾಗಿದೆ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಾತಣ್ಣವರ (29) ಕೊಲೆ ಆರೋಪಿ. ಈತ ಬಿಹಾರ ರಾಜ್ಯದ ಎಸ್‌ಎಸ್‌ಬಿ 21ನೇ ಬೆಟಾಲಿಯನ್‌ನಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಎನ್ನಲಾಗಿದೆ.
ರಕ್ಷಿತಾ ಹಾಗೂ ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿದ್ದ ಬಸಪ್ಪ, ರಕ್ಷಿತಾಳೊಂದಿಗೆ ಸುತ್ತಾಡುತ್ತಿದ್ದ. ಆದರೆ, ಮದುವೆ ವಿಚಾರ ಪ್ರಸ್ತಾಪವಾದಾಗಲೆಲ್ಲ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಮಾತನಾಡಲು ಅಕ್ಟೋಬರ್ 28ರಂದು ಬಸಪ್ಪ ರಕ್ಷಿತಾಳನ್ನು ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಹೋಗಿದ್ದ.
ಬಸಪ್ಪನ ಮಾತು ನಂಬಿ ರಕ್ಷಿತಾ ಆತನೊಂದಿಗೆ ಗೋಕಾಕ್ ಫಾಲ್ಸ್‌ಗೆ ತೆರಳಿದ್ದಳು. ಅಲ್ಲಿ ಮದುವೆ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ಬಸಪ್ಪ ರಕ್ಷಿತಾಳ ಕಿವಿಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಹತ್ಯೆಯ ನಂತರ ಮೃತದೇಹವನ್ನು ಗೋಕಾಕ್ ಫಾಲ್ಸ್‌ನ ಗುಡ್ಡದ ಪ್ರದೇಶದಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ.
ಅಕ್ಟೋಬರ್ 28ರಂದು ರಕ್ಷಿತಾಳ ಹತ್ಯೆ ನಡೆದಿದ್ದರೆ, ನವೆಂಬರ್ 1ರಂದು ಆಕೆಯ ಕುಟುಂಬದವರು ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ರಕ್ಷಿತಾಳ ಮೊಬೈಲ್ ಕಾಲ್ ಹಿಸ್ಟರಿ ಪರಿಶೀಲಿಸಿದಾಗ ಬಸಪ್ಪನ ಜೊತೆಗಿನ ಆತ್ಮೀಯತೆ ಬೆಳಕಿಗೆ ಬಂದಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಬಸಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಕ್ಷಿತಾಳನ್ನು ಹತ್ಯೆ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ಜೈಲಿಗಟ್ಟಲಾಗಿದೆ.

