HomeLatest Newsದೀಪಾವಳಿ ಸ್ಪೆಷಲ್: 50 ವರ್ಷಗಳ ಹಳೆಯ ಕೌಟುಂಬಿಕ ಶೈಲಿಯ ಮೈಸೂರ್ ಪಾಕ್ ರೆಸಿಪಿ ಹಂಚಿಕೊಂಡ ಪದ್ಮಾ...

ದೀಪಾವಳಿ ಸ್ಪೆಷಲ್: 50 ವರ್ಷಗಳ ಹಳೆಯ ಕೌಟುಂಬಿಕ ಶೈಲಿಯ ಮೈಸೂರ್ ಪಾಕ್ ರೆಸಿಪಿ ಹಂಚಿಕೊಂಡ ಪದ್ಮಾ ಲಕ್ಷ್ಮಿ!

ದೀಪಾವಳಿ ಹಬ್ಬದ ಸಂಭ್ರಮವು ಸಾಂಪ್ರದಾಯಿಕ ಸಿಹಿ ತಿಂಡಿಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ದೀಪಾವಳಿ ಹಬ್ಬದ ಸಡಗರಕ್ಕಾಗಿ ಪ್ರಸಿದ್ಧ ಮಾಡೆಲ್ ಹಾಗೂ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ (Padma Lakshmi) ಅವರು ತಮ್ಮ ಕುಟುಂಬದಲ್ಲಿ 50 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿರುವ ಸಾಂಪ್ರದಾಯಿಕ ಮೈಸೂರ್ ಪಾಕ್ ತಯಾರಿಸುವ ಸರಳ ವಿಧಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

“ನಾವು ದಕ್ಷಿಣ ಭಾರತದ ಪ್ರಸಿದ್ಧ ಸಿಹಿ ತಿಂಡಿ ಮೈಸೂರ್ ಪಾಕ್ ತಯಾರಿಸಲಿದ್ದೇವೆ. ಭಾರತದಲ್ಲಿ ಚೆನ್ನೈನ ನಮ್ಮ ಕುಟುಂಬದಲ್ಲಿ ಕಳೆದ ಐದು ದಶಕಗಳಿಂದ ಮೈಸೂರ್ ಪಾಕ್ ತಯಾರಿಸುತ್ತಿದ್ದ ಶೈಲಿಯಲ್ಲಿ ಇದನ್ನು ನಿಮಗೆ ಕಲಿಸಿಕೊಡುತ್ತಿದ್ದೇನೆ” ಎಂದು ಪದ್ಮಾ ಲಕ್ಷ್ಮಿ ತಿಳಿಸಿದ್ದಾರೆ.

ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ನೀರು: 2 ಕಪ್

  • ಸಕ್ಕರೆ: 2 ಕಪ್

  • ಕಡಲೆ ಹಿಟ್ಟು

  • ತುಪ್ಪ

ತಯಾರಿಸುವ ವಿಧಾನ: ಮೊದಲಿಗೆ ಬಾಣಲೆಯಲ್ಲಿ 2 ಕಪ್ ಸಕ್ಕರೆ ಹಾಗೂ 2 ಕಪ್ ನೀರನ್ನು ಸೇರಿಸಿ ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ನಿಧಾನವಾಗಿ ಕಲಕಬೇಕು. ಈ ಸಕ್ಕರೆ ಪಾಕವು ಒಂದು ಎಳೆ ಪಾಕದ ಹಂತಕ್ಕೆ ಬರುವವರೆಗೆ ಕುದಿಸಬೇಕು.

ನಂತರ ಬಾಣಲೆಯನ್ನು ಉರಿಯಿಂದ ಕೆಳಗಿಳಿಸಿ ತಕ್ಷಣವೇ ಕಡಲೆ ಹಿಟ್ಟನ್ನು ಗಂಟುಗಳಿಲ್ಲದಂತೆ ವೇಗವಾಗಿ ಬೆರೆಸಬೇಕು. ಬಳಿಕ ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿಟ್ಟು ನಿರಂತರವಾಗಿ ಕೈಯಾಡಿಸುತ್ತಾ ಕಾಯಿಸಿದ ಬಿಸಿ ತುಪ್ಪವನ್ನು ಹಂತ ಹಂತವಾಗಿ ಸೇರಿಸಬೇಕು. ಸುಮಾರು 15 ನಿಮಿಷಗಳ ಕಾಲ ನಿರಂತರವಾಗಿ ಬೆರೆಸಿದಾಗ ಮಿಶ್ರಣವು ದಪ್ಪಗಾಗಿ ಬಾಣಲೆಯ ಬದಿಗಳನ್ನು ಬಿಟ್ಟು ಒಂದಾಗಲು ಪ್ರಾರಂಭಿಸುತ್ತದೆ.

ಮಿಶ್ರಣವು ಬಿಸಿಯಾಗಿದ್ದಾಗಲೇ ಅದನ್ನು ತುಪ್ಪ ಸವರಿದ ಪಾತ್ರೆಗೆ ಸುರಿದು ಸಮನಾಗಿ ಹರಡಬೇಕು. ಸ್ವಲ್ಪ ಗಟ್ಟಿಯಾದ ನಂತರ ನಮಗೆ ಬೇಕಾದ ವಜ್ರಾಕಾರದಲ್ಲಿ ಅಥವಾ ಆಯತಾಕಾರದಲ್ಲಿ ತುಂಡರಿಸಿಕೊಳ್ಳಬಹುದು. “ಕೆಲವರು ಇದನ್ನು ಆಯತಾಕಾರದಲ್ಲಿ ಕತ್ತರಿಸುತ್ತಾರೆ, ನನಗೆ ಸಾಫ್ಟ್ ಅಥವಾ ಫಡ್ಜ್ ಶೈಲಿಗಿಂತ ಕರುಕು ಶೈಲಿಯ ಮೈಸೂರ್ ಪಾಕ್ ಎಂದರೆ ಇಷ್ಟ” ಎಂದು ಅವರು ಹೇಳಿದ್ದಾರೆ. ಮಿಶ್ರಣ ತಂಪಾದ ನಂತರ ತುಂಡುಗಳನ್ನು ಪ್ರತ್ಯೇಕಿಸಿದರೆ ರುಚಿಕರವಾದ ಮೈಸೂರ್ ಪಾಕ್ ಸಿದ್ಧವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular