HomeLatest Newsವಿಕೆಟ್ ಬೇಟೆಯಾಡಿ ಹೊಸ ದಾಖಲೆ ಬರೆದ ಅರ್ಶ್‌ದೀಪ್: ಕಿವೀಸ್ ನಾಡಿನಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಆರ್ಭಟ!

ವಿಕೆಟ್ ಬೇಟೆಯಾಡಿ ಹೊಸ ದಾಖಲೆ ಬರೆದ ಅರ್ಶ್‌ದೀಪ್: ಕಿವೀಸ್ ನಾಡಿನಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಆರ್ಭಟ!

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಭರ್ಜರಿ ಬೌಲಿಂಗ್ ನಡೆಸಿ ಹೊಸ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ 10 ಓವರ್‌ ಬೌಲ್ ಮಾಡಿ 70 ರನ್‌ ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ, ನ್ಯೂಜಿಲೆಂಡ್ ಮಣ್ಣಿನಲ್ಲಿ 4 ವಿಕೆಟ್ ಸಾಧನೆ ಮಾಡಿದ ಭಾರತದ ಮೂರನೇ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅರ್ಶ್‌ದೀಪ್‌ಗಿಂತ ಮೊದಲು ಭಾರತದ ದಿಗ್ಗಜ ವೇಗಿಗಳಾದ ಜವಗಲ್ ಶ್ರೀನಾಥ್ ಮತ್ತು ಮೊಹಮ್ಮದ್ ಶಮಿ ಮಾತ್ರ ನ್ಯೂಜಿಲೆಂಡ್‌ನಲ್ಲಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದೀಗ ಶ್ರೀನಾಥ್ (2003 ರಲ್ಲಿ 4/23 ಮತ್ತು 1995 ರಲ್ಲಿ 4/52) ಹಾಗೂ ಶಮಿ (2014 ರಲ್ಲಿ 4/55) ಅವರ ಸಾಲಿಗೆ ಅರ್ಶ್‌ದೀಪ್ ಸೇರ್ಪಡೆಯಾಗಿದ್ದಾರೆ. ಕೇವಲ ಒಂದು ವಿಕೆಟ್ ಸಿಕ್ಕಿದ್ದರೆ ಅನಿಲ್ ಕುಂಬ್ಳೆ ಅವರ ನಂತರ ನ್ಯೂಜಿಲೆಂಡ್‌ನಲ್ಲಿ 5 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಿದ್ದರು.

ಮೈದಾನದ ಪರಿಸ್ಥಿತಿ ಮತ್ತು ಶಾರ್ಟ್ ಬಾಲ್ ತಂತ್ರ ತಮ್ಮ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಅರ್ಶ್‌ದೀಪ್, “ಇಲ್ಲಿನ ಹವಾಮಾನ ಮತ್ತು ಪಿಚ್ ಬೌಲಿಂಗ್‌ಗೆ ತುಂಬಾ ಅನುಕೂಲಕರವಾಗಿತ್ತು. ಭಾರತೀಯ ಉಪಖಂಡದಲ್ಲಿ ಬೌಲಿಂಗ್ ಮಾಡಿ ಬಂದ ನಮಗೆ, ಇಲ್ಲಿ ಪಿಚ್‌ನಲ್ಲಿ ಸಪೋರ್ಟ್ ಸಿಕ್ಕಿದ್ದು ತುಂಬಾ ಖುಷಿ ನೀಡಿತು. ಗಾಳಿ ಕೂಡ ಬೌಲಿಂಗ್‌ಗೆ ಪೂರಕವಾಗಿತ್ತು. ಪಿಚ್‌ನಲ್ಲಿ ಸೀಮ್ ಮೂವ್‌ಮೆಂಟ್ ಇದ್ದಿದ್ದರಿಂದ ಶಾರ್ಟ್ ಬಾಲ್ ತಂತ್ರ ಬಳಸಿದೆವು, ಅದಕ್ಕೆ ತಕ್ಕಂತೆ ವಿಕೆಟ್‌ಗಳು ಕೂಡ ಸಿಕ್ಕವು” ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೈತಪ್ಪಿದ 5ನೇ ವಿಕೆಟ್ ಮತ್ತು ವೈರಲ್ ಸೆಲೆಬ್ರೇಷನ್ “5ನೇ ವಿಕೆಟ್ ಸಿಕ್ಕಿದ್ದರೆ ಅದೇ ನನ್ನ ನೆಚ್ಚಿನ ವಿಕೆಟ್ ಆಗುತ್ತಿತ್ತು, ಆದರೆ ಅದು ಸಿಗಲಿಲ್ಲ. ಹಾಗಾಗಿ ಅದರ ಹುಡುಕಾಟದಲ್ಲಿದ್ದೇನೆ” ಎಂದು ತಮಾಷೆಯಾಗಿ ಹೇಳಿದ ಅವರು, ಕೈಲ್ ಜೇಮಿಸನ್ ವಿಕೆಟ್ ಪಡೆದ ನಂತರ ಮಾಡಿದ ವಿಶೇಷ ಡ್ಯಾನ್ಸ್ ಸೆಲೆಬ್ರೇಷನ್ ತಮ್ಮ ಗೆಳತಿ ಸಮ್ರೀನ್ ಕೌರ್‌ಗಾಗಿ ಮಾಡಿದ್ದಾಗಿ ಸ್ಪಷ್ಟಪಡಿಸಿದರು.

ಕೇವಲ 185 ರನ್‌ಗಳಿಗೆ ನ್ಯೂಜಿಲೆಂಡ್ ಆಲೌಟ್ ಅರ್ಶ್‌ದೀಪ್ ಸಿಂಗ್ ಅವರ 4 ವಿಕೆಟ್ ಸಾಧನೆಗೆ ಸಾಥ್ ನೀಡಿದ ಗುರ್ನೂರ್ ಬ್ರಾರ್ (3/44) ಮತ್ತು ಅಂಶುಲ್ ಕಂಬೋಜ್ (2/22), ನ್ಯೂಜಿಲೆಂಡ್ ತಂಡವನ್ನು ಕೇವಲ 185 ರನ್‌ಗಳಿಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಿವೀಸ್ ಪರ ಟಿಮ್ ಸೀಫರ್ಟ್ (38) ಮತ್ತು ಬ್ಲೇರ್ ಟಿಕ್ನರ್ (34) ಅಲ್ಪ ಮೊತ್ತದ ಕಾಣಿಕೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular