HomeLatest Newsವಿಕೆಟ್ ಬೀಳುತ್ತಿದ್ದಂತೆ ಮೈದಾನದಲ್ಲೇ ಅರ್ಶ್‌ದೀಪ್ ಡ್ಯಾನ್ಸ್: ಕ್ಯೂಟ್ ಸೆಲೆಬ್ರೇಷನ್ ಹಿಂದಿತ್ತು ಲವ್ಲಿ ಕಾರಣ!

ವಿಕೆಟ್ ಬೀಳುತ್ತಿದ್ದಂತೆ ಮೈದಾನದಲ್ಲೇ ಅರ್ಶ್‌ದೀಪ್ ಡ್ಯಾನ್ಸ್: ಕ್ಯೂಟ್ ಸೆಲೆಬ್ರೇಷನ್ ಹಿಂದಿತ್ತು ಲವ್ಲಿ ಕಾರಣ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವೇಗಿ ಅರ್ಶ್‌ದೀಪ್ ಸಿಂಗ್ ತಮ್ಮ ಬೌಲಿಂಗ್ ಜೊತೆಗೆ ವಿಭಿನ್ನ ಸಂಭ್ರಮಾಚರಣೆಯ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ವಿಕೆಟ್ ಪಡೆದ ನಂತರ ಅರ್ಶ್‌ದೀಪ್ ಮಾಡಿದ ವಿಶೇಷ ಡ್ಯಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾನ್ಯವಾಗಿ ವಿಕೆಟ್ ಬಿದ್ದಾಗ ಆಕ್ರಮಣಕಾರಿ ಶೈಲಿಯಲ್ಲಿ ಸಂಭ್ರಮಿಸುವ ಅರ್ಶ್‌ದೀಪ್, ಈ ಬಾರಿ ಮೈದಾನದಲ್ಲೇ ತಮಾಷೆಯಾಗಿ ಡ್ಯಾನ್ಸ್ ಹೆಜ್ಜೆಗಳನ್ನು ಹಾಕಿದರು. ಇದನ್ನು ಕಂಡ ಸಹಪಾಠಿಗಳು ಹಾಗೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಪಂದ್ಯದ ಮಧ್ಯಂತರದ ವೇಳೆ ನಡೆಸಿದ ಸಂದರ್ಶನದಲ್ಲಿ ಈ ವಿಶಿಷ್ಟ ಸೆಲೆಬ್ರೇಷನ್ ಹಿಂದಿನ ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.

ಗೆಳತಿ ಸಮ್ರೀನ್ ಕೌರ್‌ಗಾಗಿ ವಿಶೇಷ ನೃತ್ಯ ಈ ಕುರಿತು ಮಾತನಾಡಿದ ಅರ್ಶ್‌ದೀಪ್ ಸಿಂಗ್, “ಈ ಡ್ಯಾನ್ಸ್ ಹೆಜ್ಜೆಗಳು ನನ್ನ ಗೆಳತಿಗಾಗಿ ಮೀಸಲಾದವು. ನಾವು ಹೊರಗಡೆ ವಾಕಿಂಗ್ ಹೋದಾಗ ಅಥವಾ ಸುತ್ತಾಡುವಾಗ ಇಬ್ಬರೂ ಸೇರಿ ಈ ರೀತಿಯ ಡ್ಯಾನ್ಸ್ ಮಾಡುತ್ತೇವೆ. ನಮ್ಮ್ಲಲಿ ಯಾರಾದರೂ ಬೇಸರದಲ್ಲಿದ್ದಾಗ ಅಥವಾ ಮೂಡ್ ಸರಿ ಇಲ್ಲದಿದ್ದಾಗ ಪರಸ್ಪರ ಖುಷಿಪಡಿಸಲು ಈ ರೀತಿ ಡ್ಯಾನ್ಸ್ ಮಾಡುತ್ತೇವೆ. ಹಾಗಾಗಿ ಈ ವಿಕೆಟ್ ಅನ್ನು ಆಕೆಗೆ ಅರ್ಪಿಸಲು ಹೀಗೆ ಮಾಡಿದೆ” ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಶ್‌ದೀಪ್ ಸಿಂಗ್ ಅವರ ಗೆಳತಿ ಸಮ್ರೀನ್ ಕೌರ್ ನಟಿ ಮತ್ತು ಮಾಡೆಲ್ ಆಗಿದ್ದಾರೆ. ಮೈದಾನದಲ್ಲಿ ಸದಾ ಗಂಭೀರವಾಗಿ ಬೌಲಿಂಗ್ ಮಾಡುವ ಅರ್ಶ್‌ದೀಪ್, ತಮ್ಮ ವೈಯಕ್ತಿಕ ಜೀವನದ ಈ ಸುಂದರ ಕ್ಷಣವನ್ನು ಮೈದಾನದಲ್ಲೂ ತಂದು ಅಭಿಮಾನಿಗಳ ಮನ ಗೆದ್ದಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಅರ್ಶ್‌ದೀಪ್ ಅವರ ಈ ರೋಮ್ಯಾಂಟಿಕ್ ಸೆಲೆಬ್ರೇಷನ್ ಕ್ರಿಕೆಟ್ ಪ್ರಿಯರ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular