ಹುಬ್ಬಳ್ಳಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಗಾಂಧಿಯವರು ಒಬ್ಬ ಹತಾಶ ರಾಜಕಾರಣಿ. ತಾವು ಅಪರಾಧ ಮಾಡಿರುತ್ತಾರೆ, ಅದನ್ನು ಇನ್ನೊಬ್ಬರ ಮೇಲೆ ಬಿಂಬಿಸುವಂತಹ ರೂಢಿ ಮಾಡಿಕೊಂಡಿದ್ದಾರೆ. ಸೋರಸ್ ನಿಂದ ಹಣ ಪಡೆದು ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಅವಮಾನಿಸುವುದು ದೇಶಾಭಿಮಾನಿಗಳಿಗೆ ಅವಮಾನಿಸಿದಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ವಿದೇಶದಲ್ಲಿ ಸಂಪರ್ಕ ಇರುವಂತದ್ದು ರಾಹುಲ್ ಗಾಂಧಿಗೆ, ಪದೇಪದೆ ವಿದೇಶಕ್ಕೆ ಹೋಗುತ್ತಾರೆ. ಭಾರತದ ವಿರೋಧಿಯ ಬಣದಲ್ಲಿ ಗುರುತಿಸಿಕೊಳ್ಳುತ್ತಾರೆ, ಅಷ್ಟೇ ಅಲ್ಲ ಭಾರತದ ವಿರುದ್ಧ ಹಲವಾರು ಬಾರಿ ಮಾತನಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದಾರೆ, ಟೀಕೆ ಮಾಡಿದ್ದಾರೆ.
ಮತ್ತು ಸೋರಸ್ ಜೊತೆಗೆ ಅವರಿಗೆ ನೆಂಟು ಎಂಬುದು ಎಲ್ಲರಿಗೂ ಗೊತ್ತಿರುವಂತದ್ದು. ಸೋರಸ್ ಮುಖಾಂತರ ಕೋಟ್ಯಾಂತರ ರೂಪಾಯಿ ಹಣ ಬಂದಿದ್ದರಿಂದ ಈ ಚಳವಳಿಯನ್ನು ಮಾಡುವ ಮುಖಾಂತರ ಯಾರು ಹಣವನ್ನು ಕೊಟ್ಟಿದ್ದಾರೆ, ಅವರನ್ನು ಸಮಾಧಾನ ಪಡಿಸುವ ಸಲುವಾಗಿ ಇದೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ವಿದೇಶ ಹಣ ಹರಿದು ಬರುತ್ತಿದೆ. ಆ ಹಣದಿಂದ ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲ ಗೊಳಿಸುವ ಸಲುವಾಗಿ, ಮತ್ತು ಭಾರತದ ಅಖಂಡತೆ, ಏಕತೆಗೆ ದಕ್ಕೆ ತರಲು ಹೇಸದಿರುವಂತ ಕಾರ್ಯಕ್ರಮಗಳನ್ನು ಅದರಲ್ಲಿ ಅಳವಡಿಸಿಕೊಂಡಿರುವಂತದ್ದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದ್ದಾರೆ.
ಮೋದಿ ಸೂರ್ಯನಂತೆ
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಬ್ಬ ಮೊದಲು ದೇಶಾಭಿಮಾನಿ. ತಮ್ಮ ಸ್ವಂತಕ್ಕೆ ಏನಿಲ್ಲದೆನೆ ಸಂಪೂರ್ಣ ತ್ಯಾಗ ಮಾಡಿ ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಿಟ್ಟಿರುವಂತ ಪ್ರಧಾನಮಂತ್ರಿಯ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಇಡೀ ಭಾರತ ದೇಶದ ದೇಶಾಭಿಮಾನಿಗಳಿಗೆ ಅವಮಾನ ಮಾಡಿದಂತೆ. ಸೂರ್ಯನ ಮುಂದೆ ಯಾವುದೇ ಬೆಳಕು ಕೂಡ ಅದನ್ನ ನಾವು ಹೋಲಿಸಲು ಸಾಧ್ಯ ಇಲ್ಲ. ನರೇಂದ್ರ ಮೋದಿ ಅವರು ಒಬ್ಬ ಸೂರ್ಯ ಇದ್ದ ಹಾಗೆ. ಆದ್ದರಿಂದ ಇಂತಹ ವ್ಯರ್ಥ ಮಾತುಗಳಿಗೆ ನಾವು ಹೆಚ್ಚು ಗಮನ ಕೊಡದೇನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2047 ಕ್ಕೆ ವಿಕಸಿತ ಭಾರತ ಮಾಡಬೇಕು ಎಂದು ಸಂಕಲ್ಪ ಮಾಡಿ, ಆತ್ಮನಿರ್ಭರ ಭಾರತ ಮಾಡಬೇಕು ಅಂತ ತೀರ್ಮಾನಿಸಿದ್ದಾರೆ. ಅದಕ್ಕೆ ನಾವು ಸಂಪೂರ್ಣ ಬೆಂಬಲವಾಗಿ ನಿಂತು ಭಾರತದ ಸಂವಿಧಾನದ ಪ್ರಜಾಪ್ರಭುತ್ವವನ್ನು ಉಳಿಸಬೇಕು, ಭಾರತ ಅಭಿವೃದ್ಧಿಶೀಲ ರಾಷ್ಟ್ರವನ್ನು ಮಾಡಬೇಕು. ಭಾರತಕ್ಕೆ ಇಡೀ ವಿಶ್ವದಲ್ಲೇ ನಾಯಕ ಸ್ಥಾನ ಕೊಡಬೇಕು ಅನ್ನುವಂತ ನರೇಂದ್ರ ಮೋದಿ ಅವರ ವಿಚಾರಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದ್ದಾರೆ.
📄 Official Documents / Supporting Documents

