ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾ ತೆರೆಗೆ ಬರಲು ಇನ್ನೂ ಕೆಲವು ತಿಂಗಳುಗಳ ಸಮಯವಿದೆ. ಈ ನಡುವೆ ನಟ ಮಹೇಶ್ ಬಾಬು ಗೇಮಿಂಗ್ ಉದ್ಯಮಕ್ಕೆ ಹೆಜ್ಜೆ ಇಡುವ ಮೂಲಕ ಹೊಸ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಮುಂಬೈ ಮೂಲದ ಇಂಟರಾಕ್ಟಿವ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯಾದ ‘ಶಾಟ್‌ಗನ್ ಗೇಮ್ಸ್’ನಲ್ಲಿ ಅವರು ತಂತ್ರನಾತ್ಮಕ ಹೂಡಿಕೆದಾರರಾಗಿ ಭಾಗಿಯಾಗಿದ್ದಾರೆ.
‘ಟೇಕ್‌ಡೌನ್ ಜೆನೆಸಿಸ್’ ಆಕ್ಷನ್-ಅಡ್ವೆಂಚರ್ ಗೇಮ್ ಶಾಟ್‌ಗನ್ ಗೇಮ್ಸ್ ಸಂಸ್ಥೆಯು ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ‘ಟೇಕ್‌ಡೌನ್ ಜೆನೆಸಿಸ್’ ಹೆಸರಿನ ಪಿ ಸಿ ಮತ್ತು ಕನ್ಸೋಲ್ ಆಕ್ಷನ್-ಅಡ್ವೆಂಚರ್ ಗೇಮ್ ಅಭಿವೃದ್ಧಿಪಡಿಸುತ್ತಿದೆ. ಪ್ರಸಿದ್ಧ ನಿರ್ದೇಶಕ ವಿಕ್ಕಿ ಅರೋರಾ ನೇತೃತ್ವದಲ್ಲಿ ಈ ಗೇಮಿಂಗ್ ಯೋಜನೆಯು ರೂಪುಗೊಳ್ಳುತ್ತಿದೆ.
ಭಾರತೀಯ ತಂತ್ರಜ್ಞರ ಮೇಲಿದೆ ನಂಬಿಕೆ ಈ ಹೊಸ ಸಹಭಾಗಿತ್ವದ ಬಗ್ಗೆ ಕಂಪನಿಯ ಸಹ-ಸಂಸ್ಥಾಪಕರಾದ ಜೀತ್ ಚಂದನ್ ಮತ್ತು ವಿಧಿತ್ ಮೆಹ್ತಾ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಉನ್ನತ ಮಟ್ಟದ ಪ್ರತಿಭೆಗಳಿಗೆ ಕೊರತೆಯಿಲ್ಲ ಮತ್ತು ದೇಶದಲ್ಲೇ ಜಾಗತಿಕ ಮಟ್ಟದ ಗೇಮಿಂಗ್ ಪ್ರೊಡಕ್ಷನ್ ಮಾಡಲು ಸಾಧ್ಯವಿದೆ ಎಂದು ನಂಬಿರುವುದಾಗಿ ನಟ ಮಹೇಶ್ ಬಾಬು ತಿಳಿಸಿದ್ದಾರೆ. ಈ ಪ್ರಕಟಣೆಯ ಜತೆಗೆ ಹಂಚಿಕೊಳ್ಳಲಾದ ಅವರ ಹೊಸ ಲುಕ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಿನಿಮಾ ರಂಗದಲ್ಲಿ ‘ವಾರಣಾಸಿ’ ವೈಭವ ಇನ್ನು ಚಿತ್ರರಂಗದ ವಿಚಾರಕ್ಕೆ ಬಂದರೆ, ಮಹೇಶ್ ಬಾಬು ಸದ್ಯ ‘ವಾರಣಾಸಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ 2027ರ ಏಪ್ರಿಲ್ 7ರಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

