HomeIndiaಬೆಂಗಳೂರಿನ ಶಾಲಾ ಮಕ್ಕಳಿಗೆ ಗ್ರಾಮೀಣ ಬದುಕಿನ ಪಾಠ; ನಾಳೆಯಿಂದ ‘ಗ್ರಾಮಾನುಭವ’ ಕಾರ್ಯಕ್ರಮ ಆರಂಭ

ಬೆಂಗಳೂರಿನ ಶಾಲಾ ಮಕ್ಕಳಿಗೆ ಗ್ರಾಮೀಣ ಬದುಕಿನ ಪಾಠ; ನಾಳೆಯಿಂದ ‘ಗ್ರಾಮಾನುಭವ’ ಕಾರ್ಯಕ್ರಮ ಆರಂಭ

​ಬೆಂಗಳೂರು-ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ನೈಜ ಅನುಭವ ನೀಡುವ ಮಾನ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾ ‘ಗ್ರಾಮಾನುಭವ’ ಕಾರ್ಯಕ್ರಮಕ್ಕೆ ನವೆಂಬರ್ 01ರ ಕನ್ನಡ ರಾಜ್ಯೋತ್ಸವದಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ.

​ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದು, ನವೆಂಬರ್ 1 ರಂದು ಬೆಳಿಗ್ಗೆ 8:00 ಗಂಟೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಏಕಕಾಲಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಕಾರ್ಯಕ್ರಮದ ಉದ್ಘಾಟನೆ

​ಕಾರ್ಯಕ್ರಮದ ಮುಖ್ಯ ಉದ್ದೇಶ ಹಾಗೂ ವೈಶಿಷ್ಟ್ಯಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

​ಗುರಿ ಹೊಂದಿದ ವಿದ್ಯಾರ್ಥಿಗಳು: ನಗರ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ತಲುಪಿಸಲಾಗುತ್ತಿದೆ.

​ಪ್ರಾಯೋಗಿಕ ಕಲಿಕೆ: ತರಗತಿಯ ಕಲಿಕೆಯನ್ನು ಗ್ರಾಮೀಣ ಸಮುದಾಯದ ನೈಜ ಜೀವನದೊಂದಿಗೆ ಬೆಸೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.

ವಿದ್ಯಾರ್ಥಿಗಳಿಗೆ ಅನುಭವದ ಮಹತ್ವ

​ನೇರ ಅನುಭವ: ಶೈಕ್ಷಣಿಕ ಭೇಟಿಗಳ ಮೂಲಕ ವಿದ್ಯಾರ್ಥಿಗಳು ರೈತರು, ಕುಶಲಕರ್ಮಿಗಳು, ಪಶುಸಂಗೋಪನೆದಾರರು ಹಾಗೂ ಗ್ರಾಮೀಣ ಉದ್ಯಮಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಕಲಿಯಲಿದ್ದಾರೆ.

​ಮೌಲ್ಯವರ್ಧನೆ: ಈ ಕಾರ್ಯಕ್ರಮವು ಮಕ್ಕಳಲ್ಲಿ ಶ್ರಮದ ಘನತೆ, ರೈತರ ಬಗ್ಗೆ ಗೌರವ, ಕೃಷಿ, ಸಾಂಪ್ರದಾಯಿಕ ಜ್ಞಾನ, ಸ್ಥಳೀಯ ಸಂಸ್ಕೃತಿ ಮತ್ತು ಸುಸ್ಥಿರ ಜೀವನಶೈಲಿಯ ಅರಿವನ್ನು ಮೂಡಿಸಲಿದೆ.

​ಕರ್ನಾಟಕದ ಅಭಿವೃದ್ಧಿಯಲ್ಲಿ ಹಳ್ಳಿಗಳ ಪಾತ್ರವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಹಾಗೂ ಕಲಿಕೆಯನ್ನು ಹೆಚ್ಚು ಅನುಭವಾಧಾರಿತ ಮತ್ತು ಅರ್ಥಪೂರ್ಣವಾಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular